ಬೆಳಗಾವಿ-ಕೃಷ್ಣ ನದಿ ತೀರದ ಪ್ರದೇಶದಲ್ಲಿ ಸದ್ಯ ನೀರನ ಸಮಸ್ಯೆ ಇಲ್ಲ. ಮುಂದಿನ ಬೇಸಿಗೆ ಬರುವಷ್ಟುರಲ್ಲಿ ಎಲ್ಲಾ ಸಮಸ್ಯೆ ಇತ್ಯರ್ಥ. ಮಹಾರಾಷ್ಟ್ರ ಸರ್ಕಾರದ ಜತೆಗೆ ನೀರು ಹಂಚಿಕೆ ಬಗ್ಗೆ ಮಾತುಕತೆ ಮಾಡಬೇಕಿತ್ತು. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾತುಕತೆ ವಿಳಂಬವಾಗಿದೆ.ಶೀಘ್ರದಲ್ಲಿ ಸಾದಕ ಬಾದಕಗಳನ್ನು ಚರ್ಚಿಸಿ ನೀರು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಳ್ಳುವದಾಗಿ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಡಿಪಿಆರ್ ಸಿದ್ಧವಾದೆ. ಮುಂದಿನ ವಾರ ದೆಹಲಿಗೆ ಹೋಗಿ ಕೇಂದ್ರ ಸಚಿವರ ಜತೆಗೆ ಚರ್ಚೆ ಮಾಡುತ್ತೇನೆ.
800 ಕೋಟಿ ರೂಪಾಯಿ ಯೋಜನೆ ರೂಪರೇಷ ಸಿದ್ದವಾಗಿದೆ. ಲಾಕ್ ಡೌನ್ ನಿಂದ ನೀರಾವರಿ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದಾಗಿ
ಅನುದಾನ ಕಡಿತಗೊಂಡಿಲ್ಲ. ನೀರಾವರಿ ಇಲಾಖೆಗೆ ಯಾವುದೇ ಪರಿಣಾಮ ಬೀರಿಲ್ಲ..ಎಂದರು.