ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ.ಈ ಸಮಸ್ಯೆ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಬೆಳಗಾವಿ ಮಹಾನಗರದ ಹೃದಯ ಭಾಗದಲ್ಲಿ, ಬಾಪಟ್ ಗಲ್ಲಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಲ್ಟಿ ಲೇವಲ್ ಪಾರ್ಕಿಂಗ್ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದೆ.
ಬಾಪಟ್ ಗಲ್ಲಿಯಲ್ಲಿ ಈ ಹಿಂದೆ ಹಲವಾರು ಬಾರಿ ಮಲ್ಟಿ ಲೇವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದ್ರೆ ಈ ಬಾರಿ ಮತ್ತೆ ಶಂಕುಸ್ಥಾಪನೆ ಮಾಡಲಾಗಿದ್ದು ( ಪಿಪಿಪಿ) ಸಹಭಾಗಿತ್ವದಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು 120 ಕಾರುಗಳನ್ನು ಈ ಕಟ್ಟಡ ಪಾರ್ಕಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ.ಬಿವಿಜಿ ಕಂಪನಿಯ ಸಹಭಾಗಿತ್ವದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ.
ಎರಡು ವರ್ಷದಲ್ಲಿ ಈ ಕಟ್ಟಡ ನಿರ್ಮಿಸಲು ಸಮಯ ನಿಗದಿ ಪಡಿಸಲಾಗಿದ್ದು ಒಂದು ಅಂತಸ್ತಿನಲ್ಲಿ 30 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ.ಐದು ಅಂತಸ್ತುಗಳಲ್ಲಿ ಒಟ್ಟು 120 ಕಾರುಗಳನ್ನು ಪಾರ್ಕಿಂಗ್ ಮಾಡಬಹುದು 2006 ರಲ್ಲಿ ರಾಜ್ಯ ಸರ್ಕಾರದ ನೂರು ಕೋಟಿ ರೂ ವಿಶೇಷ ಅನುದಾನದಲ್ಲಿ ಇದನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು ಆದ್ರೆ GST ಜಾರಿಯಾಗಿದ್ದರಿಂದ ಗುತ್ತಿಗೆದಾರ ಕಾಮಗಾರಿ ಆರಂಭಿಸಲು ಹಿಂದೇಟು ಹಾಕಿದ ಹಿನ್ನಲೆಯಲ್ಲಿ ಈ ಮಲ್ಟಿ ಲೇವಲ್ ಪಾರ್ಕಿಂಗ್ ಕಟ್ಟಡ ನೆನೆಗುದಿಗೆ ಬಿದ್ದಿತ್ತು.