Breaking News

ಕಾಮಗಾರಿ ವಿಳಂಬ L&T ಕಂಪನಿಗೆ 21 ಕೋಟಿ ದಂಡ…..!!

ಬೆಳಗಾವಿ- ಸ್ಮಾರ್ಟ್ ಸಿಟಿ ಬೆಳಗಾವಿ ನಗರದಲ್ಲಿ ಕೋಟಿ,ಕೋಟಿ ಸುರಿದು, ಸಿಮೆಂಟ್ ರಸ್ತೆಗಳನ್ನು ಮಾಡಲಾಗಿದೆ. ಆದ್ರೆ ಕೋಟಿ,ಕೋಟಿ ಗಳಿಸಲು L&T ಕಂಪನಿ ಬೆಳಗಾವಿ ನಗರದ ರಸ್ತೆಗಳ‌್ನು ಕಂಡು ಕಂಡಲ್ಲಿ ಹಡ್ಡುತ್ತ,ರಸ್ತೆಗಳನ್ನು ಮೂರಾಬಟ್ಟೆ ಮಾಡಿದೆ.

ಬೆಳಗಾವಿ ಮಹಾನಗರದ ಎಲ್ಲ ವಾರ್ಡುಗಳಲ್ಲಿ ನಿರಂತರ ,24*7 ನೀರು ಪೂರೈಸುವ ಯೋಜನೆಯ ಗುತ್ತಿಗೆಯನ್ನು L&T ಕಂಪನಿ ಪಡೆದಿದೆ. ಈ ಯೋಜನೆ ಪೈಪಲೈನ್ ಹಾಕಲು ನಗರದ ರಸ್ತೆಗಳನ್ನು ಹಡ್ಡಿ ಪೈಪ್ ಗಳನ್ನು ಹಾಕಲಾಗುತ್ತಿದೆ.ಪೈಪ್ ಹಾಕಿದ ಬಳಿಕ ರಸ್ತೆಗಳು ಹೇಗಿದ್ದವೋ ಹಾಗೆ ಮಾಡಿಕೊಡುವದು,ಹಡ್ಡಿದ ರಸ್ತೆಗಳನ್ನು ದುರಸ್ತಿ ಮಾಡುವದು ಷರತ್ತು ಇದೆ.ಆದ್ರೆ ಕಂಪನಿ ಷರತ್ತಿನಂತೆ ನಡೆದುಕೊಳ್ಳುತ್ತಿಲ್ಲ.ಮಣ್ಣು ಮುಚ್ವಿ ಕೈತೊಳೆದುಕೊಳ್ಳುತ್ತಿದೆ.

L&T ಕಂಪನಿ ಷರತ್ತು ಗಳನ್ನು ಉಲ್ಲಂಘನೆ ಮಾಡುವದರ ಜೊತೆಗೆ ಕಾಮಗಾರಿಯನ್ನೂ ವಿಳಂಬ ಗತಿಯಲ್ಲಿ ನಡೆಸುತ್ತಿದೆ. ಈ ಎಲ್ಲ ದೋಷಗಳನ್ನು ಆಧರಿಸಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಧೈರ್ಯಮಾಡಿ, ಕಂಪನಿಗೆ 21 ಕೋಟಿ ರೂ ದಂಡ ವಿಧಿಸಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *