ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾದಲ್ಲಿ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊರ್ವ ಲಾರಿ ಚಾಲಕನ ನಿರ್ಲಕ್ಷತನದಿಂದ ಲಾರಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ ಘಟನೆ ಸುರೇಬಾನದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಸ್ಥಳೀಯ ವ್ಯಾಪಾರಸ್ಥರು ಹಾಗೂ ಲಾರಿ ಮಾಲೀಕರಾದ ರಾಮಚಂದ್ರ ಪಾಂಡಪ್ಪ ರಾಮಚಂದ್ರಪ್ಪ ಗೋಕಾವಿ ಎಂಬುವವರ ಲಾರಿಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೃತಪಟ್ಟ ದುರ್ದೈವಿ ಮನಿಹಾಳ ಗ್ರಾಮದ ನಿವಾಸಿ ಈರಪ್ಪ ಮಾರುತೆಪ್ಪ ಕಟಾವಕರ (೫೨) ಎಂದು ತಿಳಿದು ಬಂದಿದೆ.
ಲಾರಿಯಲ್ಲಿದ್ದ ಉಪ್ಪಿನ ಚೀಲಗಳನ್ನು ಖಾಲಿ ಮಾಡುವ ವೇಳೆ ಲಾರಿಗೆ ವಿದ್ಯುತ್ ಸರಬರಾಜ ಮಾಡುವ ಸರ್ವಿಸ್ ಲೇನ್ ಹರಿದು ಲಾರಿಗೆ ಸ್ಪರ್ಶದಿಂದ ಈ ದುರ್ಘಟನೆ ಸಂಭವಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ