ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಕೊರೋನಾ, ಪಾಸಟೀವ್ ಪ್ರಕರಣ ಬೆಳಕಿಗೆ ಬಂದಾಗ ಯಾವ ರೀತಿಯ ಭಯ ಇತ್ತೋ ಆ ಭಯ ಈಗ ನಿರ್ಭಯವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ,ಸೊಂಕಿತರ ಸಂಖ್ಯೆ 300 ಗಡಿ ದಾಟಿದರೂ ಜನ ನಿರ್ಭಿತರಾಗಿ ಓಡಾಡುತ್ತಿದ್ದಾರೆ.
ಆರಂಭದಲ್ಲಿ,ಮಾಸ್ಕ್ ಹಾಕಿಕೊಂಡು,ಸೈನಿಟೈಸರ್ ಬಾಟಲಿಯನ್ನು ಜೇಬಿನಲ್ಲಿ ಇಟ್ಟು, ಸೋಶಿಯಲ್ ಡಿಸ್ಟನ್ಸ್ ಕಾಯ್ದುಕೊಂಡು, ಓಡಾಡಿದ್ದರು,ದಿನಕಳೆದಂತೆ ಸೊಂಕಿತರ ಸಂಖ್ಯೆ ಹೆಚ್ಚಾದರೂ ಜನರಲ್ಲಿದ್ದ ಭೀತಿ ಮಾತ್ರ ದೂರವಾಗಿದೆ.
ಜನ ಆರಂಭದಲ್ಲಿ ಕೊರೋನಾ ಬಂದಿದೆ ಎಂದು ಹೆದರಿದ್ದರು,ಈಗ ಬೆಳಗಾವಿ ಜನರ ಓಡಾಟ,ಧೈರ್ಯ, ಗದ್ದಲ ನೋಡಿ ಮಹಾಮಾರಿ ವೈರಸ್ ಹೆದರಿದಂತೆ ಕಾಣುತ್ತಿದೆ.ಯಾಕಂದ್ರೆ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ರೀತಿಯ ನಂಜು ಏರಿ,ಈಗ ತಣ್ಣಗಾಗಿದೆ.
ಬೆಳಗಾವಿಯಲ್ಲಿ ಎಲ್ಲ ರೀತಿಯ ವ್ಯೆವಹಾರ ಶುರುವಾಗಿದೆ,ಹೊಟೇಲ್ ಗಳಿಂದ ದೋಸೆ,ಪೂರಿಭಾಜಿ ವಾಸನೆಯೂ ಬರುತ್ತಿದೆ. ಮಾರ್ಟ್ ,ಮಾಲ್ ,ಬಝಾರ್ ಗಳಲ್ಲಿ ಗ್ರಾಹಕರು ಕ್ಯು ನಿಂತು ಸೋಶಿಯಲ್ ಡಿಸ್ಟನ್ಸ್ ಕಾಯುವದನ್ನು ಮರೆತಿದ್ದಾರೆ,ಯಾವುದೇ ಹೆದರಿಕೆ ಇಲ್ಲದೇ ಮಕ್ಕಳು,ಮುದುಕರು,ಮಾರ್ಕೇಟ್ ಗೆ ಬರುತ್ತಿದ್ದಾರೆ.ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.ಕೊರೋನಾ ಸಂಕಷ್ಟದಿಂದ ನರಳಿ,ನರಳಿ ಬೆಂಡಾಗಿದ್ದ ಬೆಳಗಾವಿ ಈಗ ಟೋಟಲ್ ಮೈಮರೆತಿರುವದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.
ಎಪಿಎಂಸಿ,ರವಿವಾರಪೇಟೆ,ಗಣಪತಿ ಗಲ್ಲಿ,ಮಾರುತಿ ಗಲ್ಲಿ,ಖಡೇಬಝಾರ್ ಸೇರಿದಂತೆ ಬೆಳಗಾವಿಯ ಎಲ್ಲ ಮಾರುಕಟ್ಟೆ ಪ್ರದೇಶಗಳಲ್ಲಿ ಮತ್ತೆ ಗದ್ದಲ ಶುರುವಾಗಿದೆ,ಬಹಳಷ್ಟು ಜನ ಮಾಸ್ಕ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ,ಪಾಲಕರ ಜೊತೆ ಮಕ್ಕಳೂ ಓಡಾಡುತ್ತಿರುವದು,ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಬುಲಿಟೀನ್ ಪ್ರಕಾರ ಈವರೆಗೆ 305 ಸೊಂಕಿತರು ಪತ್ತೆಯಾಗಿದ್ದಾರೆ,ಇದರಲ್ಲಿ 8 ಜನ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ, ಬೆಳಗಾವಿ ಜಿಲ್ಲೆಯ 297 ಸೊಂಕಿತರ ಪೈಕಿ, ಒಬ್ಬರು ಮಾತ್ರ ಮೃತರಾಗಿದ್ದು,219 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.ಕೇವಲ 85 ಜನರಲ್ಲಿ ಮಾತ್ರ ಸೊಂಕು ಸಕ್ರೀಯವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಕೇವಲ ,175 ಜನರ ರಿಪೋರ್ಟ್ ಬರೋದು ಬಾಕಿ ಇದೆ.
ಬೆಳಗಾವಿ ಜಿಲ್ಲೆ ಮಹಾಮಾರಿ ವೈರಸ್ ನಿಂದ ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ,ಜನ ಜಾಗೃತಿ ವಹಿಸುವದು ಅತ್ಯಗತ್ಯ, ಮಾಸ್ಕ ಹಾಕೊಳ್ಳಿ,ಸೈನಿಟೈಸರ್ ಹಚ್ಕೊಳ್ಳಿ,ಇಲ್ಲಾ ಅಂದ್ರೆ ಪದೇ,ಪದೇ ಸೋಪಿನಿಂದ ಕೈ ತೊಳ್ಕೊಳ್ಳಿ,ಕೈ ಕುಲುಕದೇ,ನಮಸ್ಕಾರ್ ಮಾಡಿ,ಹಕ್ ಮಾಡಬೇಡಿ ಅಂತರ ಕಾಯ್ದುಕೊಂಡು ಬದುಕುವದನ್ನು ಕಲಿಯಿರಿ ಯಾಕಂದ್ರೆ ಕೊರೋನಾ ಮಹಾಮಾರಿಗೆ ಇನ್ನು ಔಷಧಿ ತಯಾರಾಗಿಲ್ಲ,
ನಿಮ್ಮ ಜೀವ ನಿಮ್ಮ ಕೈಯಲ್ಲಿ
ಅದನ್ನು ನೀವೇ ಕಾಪಾಡಿಕೊಳ್ಳಿ