ಬೆಳಗಾವಿ- ಕೇಂದ್ರದಿಂದ ಬೆಳಗಾವಿ ಜಿಲ್ಲೆಗೆ ಬರ ಅಧ್ಯಯನಕ್ಕೆ ಬಂದ ಅಧಿಕಾರಿಯಳ ಮುಂದೆ ವಿಷದ ಬಾಟಲ ಹಿಡಿದು ಬಂದ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ರೈತ ಅಪ್ಪಾಸಾಹೇಬ್ ಲಕ್ಕುಂಡಿ ಎಂಬಾತ ಅಧಿಕಾರಿಗಳ ಎದುರು ವಿಷದ ಬಾಟಲ್ ಪ್ರದರ್ಶನ ಮಾಡಿ,ಅಧಿಕಾರಿಗಳ ಸಮ್ಮುಖದಲ್ಲಿಯೇ ವಿಷ ಸೇವನೆಗೆ ಮುಂದಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಕುಲಕುಪ್ಪಿ ಬಳಿ ಗದ್ದೆಗೆ ಬಿಷದ ಬಾಟಲ್ ಹಿಡಿದು ಬಂದ ರೈತ, ೪೦ ಎಕರೆ ಪ್ರದೇಶದಲ್ಲಿ ಬೆಳೆ ಬೆಳದು ಬೆಳೆ ಹಾಳಾಗಿದೆ,ಆದರೆ ಯಾರೂ ರೈತರ ಕಷ್ಟವನ್ನು ಕೇಳುತ್ತಿಲ್ಲ,ಸರ್ಕಾರ ನಮಗೆ ಯಾವ ಗ್ಯಾಂರಟಿಯನ್ನೂ ಸಹ ನೀಡುತ್ತಿಲ್ಲ.ಹೀಗಾಗಿ ಮನನೊಂದು ನಾನು ಆತ್ಮಹತ್ಯೆಗೆ ಯತ್ನಿಸಿದೆ,ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಸರ್ಕಾರ ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದ ರೈತ,ಶೇಂಗಾ,ಹುರುಳಿ,ಸೋಯಾಬಿನ್,ಎಲ್ಲವೂ ಹಾಳಾಗಿದೆ ಎಂದ ಅಪ್ಪಾಸಾಹೇಬ್,ಪರಿಹಾರ ಕೊಡಿ ಎಂದು ಅಧಿಕಾರಿಗಳ ಬಳಿ ಅಂಗಲಾಚಿದ್ದಾನೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ