ಬೆಳಗಾವಿ ಎಪಿಎಂಸಿ ಯಲ್ಲಿ ಯಾರು ಹೊಡೀತಾರೆ ಜಾಕ್ ಪಾಟ್…..!
ಬೆಳಗಾವಿ- ಬೆಳಗಾವಿ ಎಪಿಎಂಸಿಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಇಲ್ಲ.ಇಲ್ಲಿ ರೆಡಿಯಾಗಿದೆ,ಮಿಕ್ಸ್ ಭಾಜಿ, ಹೀಗಾಗಿ ಯಾರು ಹೊಡೀತಾರೆ ಈಬಾರಿ ಬಾಜಿ ಎನ್ನುವ ಪ್ರಶ್ನೆ ಈಗ ತೀವ್ರ ಕುತೂಹಲ ಕೆರಳಿಸಿದೆ.
ಚುನಾಯಿತ ಹನ್ನೊಂದು ಸದಸ್ಯರು ಒಗ್ಗಟ್ಟಾಗಿ ಸತೀಶ್ ಜಾರಕಿಹೊಳಿ ಅವರ ಬಳಿ ಹೋದ ಬಳಿಕ,ಬಿಜೆಪಿ ಕುಂಬಕರ್ಣ ನಿದ್ದೆಯಿಂದ ಎಚ್ಚರವಾಗಿ,ಎಪಿಎಂಸಿಯಲ್ಲಿ ಅಧಿಕಾರ ಹಿಡಿಯೋದು ಹೇಗೆ ಅಂತಾ ಬೆಳಗಾವಿಯ ಗೋಮಟೇಶ್ ವಿದ್ಯಾಪೀಠದಲ್ಲಿ ಸಭೆ ನಡೆಸಿದೆ.
ಬೆಳಗಾವಿ ಎಪಿಎಂಸಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸೂತ್ರಧಾರಿಗಳಾಗಿದ್ದು,ಅದ್ಯಕ್ಷ ಯಾರಾಗ್ತಾರೆ ಎನ್ನುವದು ನಿಗೂಢವಾಗಿದೆ.
ಈ ಹಿಂದೆ ಬುಡಾ ಅದ್ಯಕ್ಷರಾಗಿದ್ದ ಯುವರಾಜ ಕದಂ ಅವರನ್ನೇ ಈ ಬಾರಿಯೂ ಎಪಿಎಂಸಿ ಅದ್ಯಕ್ಷ ಗಾದಿಗೆ ಕೂರಿಸುವ ಎಲ್ಲ ಪ್ರಯತ್ನಗಳು ನಡೆದಿವೆ.
ಸೋಮವಾರ ಬೆಳಿಗ್ಗೆ ಸತೀಶ್ ಜಾರಕಿಹೊಳಿ ಅವರು ಅದ್ಯಕ್ಷ ಉಪಾದ್ಯಕ್ಷರ ಹೆಸರನ್ನು ಸೂಚಿಸಲಿದ್ದಾರೆ,ನಂತರ ಅವರು ನಾಮಪತ್ರ ಸಲ್ಲಿಸುತ್ತಾರೆ.ಎನ್ನುವ ಮಾಹಿತಿ ಇದೆ .
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಈಗಾಗಲೇ ಸತೀಶ್ ಜಾರಕಿಹೊಳಿ ಅವರ ಜೊತೆ ಎಪಿಎಂಸಿ ಅದ್ಯಕ್ಷ ಉಪಾದ್ಯಕ್ಷರ ಆಯ್ಕೆಯ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಹಿರಿಯ ಮುಖಂಡ ಯುವರಾಜ್ ಕದಂ ಅವರನ್ನು ಬುಡಾ ಅದ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು,ಈ ಬಾರಿ ನಮಗೊಂದು ಛಾನ್ಸ್ ಕೊಡಿ ಎಂದು ಎಪಿಎಂಸಿಯ ಇತರ ಕಾಂಗ್ರೆಸ್ ಸದಸ್ಯರು ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ.
ಅದ್ಯಕ್ಷ ಮತ್ತು ಉಪಾದ್ಯಕ್ಷ ಎರಡೂ ಸ್ಥಾನಗಳು ಮರಾಠಿ ಭಾಷಿಕ ಸದಸ್ಯರಿಗೆ ಒಲಿಯುವ ಸಾಧ್ಯತೆಗಳಿದ್ದು,ಇದನ್ನು ಮನವರಿಕೆ ಮಾಡಿಕೊಂಡಿರುವ ಕನ್ನಡ ಭಾಷಿಕ ಸದಸ್ಯರು,ನಮ್ಮ ಪರವಾಗಿ ಯಾರು ಬ್ಯಾಟಂಗ್ ಮಾಡಬಹುದು ಎಂದು ಚಿಂತನೆ ಮಾಡುತ್ತಿದ್ದಾರೆ.
ಬಿಜೆಪಿ ನಾಯಕರು ಬೆಳಗಾವಿ ಎಪಿಎಂಸಿ ವಿಚಾರದಲ್ಲಿ ಯಾವ ಆಟ ಆಡಬಹುದು,ಎನ್ನುವದು ನಾಳೆ ಸೋಮವಾರ ಗೊತ್ತಾಗಲಿದೆ.