ಬೆಳಗಾವಿ-ಆತ ವೃತ್ತಿಯಲ್ಲಿ ಐಟಿ ಅಧಿಕಾರಿ ಐಟಿ ಅಂದ್ರೆ ಕೇಳ್ಬೇಕಾ ಭ್ರಷ್ಟರನ್ನ ಬೇಟೆಯಾಡುವ ಧೀರರು ಅಂತಾನೆ ಐಟಿ ಅಧಿಕಾರಿಗಳಿಗೆ ಹೆಸರಿದೆ.ದೇಶ ವ್ಯಾಪ್ತಿ ಅವರು ಭ್ರಷ್ಟರನ್ನು ಜಾಲಾಡುವ ರೀತಿ ಎಂಥವರನ್ನೂ ನಿಬ್ಬೆರಗಾಗಿಸುತ್ತೆ ಆದರೆ ಇಲ್ಲೊಬ್ಬ ಕಳ್ಳ ಅಧಿಕಾರಿ ಬಂಗಾರದ ಅಭರಣದ ಮಾಲೀಕನೊಬ್ಬನ ಕಡೆಯಿಂದ ಹಣಕ್ಕೆ ಬೇಡಿಕೆ ಇಟ್ಟು ಹಣವನ್ನ ಸ್ವೀಕರಿಸುವಾಗಲೇ ರೆಡ್ ಹ್ಯಾಂಡಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಈ ಅಧಿಕಾರಿಯ ಹೆಸರು ಅವಿನಾಶ ಟೊಪನೆ ಅಂತಾ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಐಟಿ ಅಧಿಕಾರಿ ಅಂತ ಹೇಳ್ತಿದ್ದಾನೆ. ಈತ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪರಶುರಾಮ್ ಬಂಕಾಪುರ ಎನ್ನುವವರ ಬಂಗಾರ ಅಂಗಡಿಗೆ ಹೋಗಿ ಅಲ್ಲಿ ಅವರನ್ನ ಬ್ಲಾಕ್ ಮೇಲ್ ಮಾಡಿ ನೀನು ಮನಿ ಲ್ಯಾಂಡ್ರಿಂಗ್ ಮಾಡ್ತಿಯಾ ನಿಂದು ಇಲ್ಲಿಗಲ್ ಬ್ಯುಸಿನೆಸ್ ಇದೆ. ಅಂತ ಹೇಳಿ ಪರಶುರಾಮ್ ಹತ್ರ ೫ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನು.. ದಿನಕ್ಕೊಂದು ಲೊಕೆಷನ್ ಕಳಿಸಿ ಈ ಜಾಗಕ್ಕೆ ಹಣ ತಂದು ಕೊಡು ಎಂದು ಪೀಡಿಸುತ್ತಿದ್ದ ಈ ವಿಷಯವನ್ನ ಕೂಡಲೇ ಪರಶುರಾಮ್ ಮಾರ್ಕೆಟ್ ವಿಭಾಗದ ಎಸಿಪಿ ನಾರಯಣ ಬರಮನಿಯವರಿಗೆ ತಿಳಿಸಿದಾಗ ಅವರು ತಮ್ಮ ತಂಡವನ್ನು ಅಖಾಡಕ್ಕೆ ಇಳಿಸಿದ್ರು ಪ್ರೀ ಪ್ಲಾನ್ ಮಾಡಿ ಐಟಿ ಅಧಿಕಾರಿಯನ್ನ ಹಣ ಪಡೆಯುವಾಗಲೇ ಖೆಡ್ಡಾಕೆ ಕೆಡವಿ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಅಂಕಲಿಯಲ್ಲಿರುವ ಪರಶುರಾಮ್ ಅವರ ಅಂಗಡಿಗೆ ತಮ್ಮ ಸಿಬ್ಬಂದಿಗಳೊಂದಿಗೆ ಹೋಗಿದ್ದ ಐಟಿ ಅಧಿಕಾರಿ ಟೋನಪೆ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಪರಶುರಾಮ್ ಪೊಲೀಸರಿಗೆ ತಿಳಿಸಿ ಕವರ್ ನಲ್ಲಿ ೪೦ ಸಾವಿರ ಹಣ ಇಟ್ಟಕೊಂಡು ಟೊಣಪೆ ಹೇಳಿದ ಜಾಗಕ್ಕೆ ಹೋಗಿ ನಿಂತಿದ್ದರು. ಮಪ್ತಿಯಲ್ಲಿದ್ದ ಪೊಲೀಸರು ಟೊಣಪೆ ಹಣ ಪಡೆಯುತ್ತಿದ್ದಂತೆ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಸದ್ಯ ಐಟಿ ಅಧಿಕಾರಿ ಅವಿನಾಶ ಟೊನಪೆ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು ಎಪಿಎಂಸಿ ಠಾಣೆಗೆ ಕರೆತಂದು ತನಿಖೆ ನಡೆಸುತ್ತಿದ್ದಾರೆ.ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಐಟಿ ಅಧಿಕಾರಿ ವಿಚಾರಣೆ ನಡೆಸುತ್ತಿದ್ದಾರೆ.
ಐಟಿ ಅಧಿಕಾರಿಗಳು ಅಂದ್ರೆ ಭ್ರಷ್ಟರ ಬೇಟೆಯಾಡುವ ಸಿಂಹಗಳು ಎನ್ನುವುದು ಜನಮಾನಸಲ್ಲಿ ಇರುವ ಪರಿಕಲ್ಪನೆ. ಆದರೆ ಇಂತಹ ಅಧಿಕಾರಿಗಳು ಅಂತಹ ಹೆಸರಿಗೆ ಕಳಂಕ ಆಗ್ತಿದ್ದಾರೆ. ಸದ್ಯ ಪೊಲೀಸರಿಂದ ಬಂಧಿಸಲಾಗಿರುವ ಅವಿನಾಶ್ ಟೊಣಪೆ ಅಸಲಿ ಐಟಿ ಅಧಿಕಾರಿ ಆಗಿದ್ದು ಈ ರೀತಿ ಹಣಕ್ಕೆ ಬೇಡಿಕೆ ಇಟ್ಟು ನಡುದಾರಿಯಲ್ಲಿ ಲಂಚಕ್ಕೆ ಕೈ ಒಡ್ಡೋದು ಎಷ್ಟು ಸರಿ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.