ಬೆಳಗಾವಿ- ಜಿಟಿಜಿಟಿ ಮಳೆ ಮಧ್ಯೆಯೂ ಬೆಳಗಾವಿಯಲ್ಲಿ ಪಿಯು ಇಂಗ್ಲಿಷ್ ಪರೀಕ್ಷೆ ನಡೆಯಿತು
ಬೆಳಿಗ್ಗೆ 7 ಘಂಟೆಗೆ ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರದತ್ತ ಧಾವಿಸಿದ ವಿದ್ಯಾರ್ಥಿಗಳು ಬಸ್‌ಗಳು ಸಿಗುತ್ತೋ ಇಲ್ವೋ ಎಂಬ ಆತಂಕದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬೆಳಗಿನ ಜಾವವೇ ಹಾಜರಾಗಿದ್ದರು. ಉಪನ್ಯಾಸಕರು ಕರೆ ಮಾಡಿ ಪರೀಕ್ಷೆಯಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ತಿಳಿಸಿದ್ದರು. ಕೆಲವರು,ಸರ್ಕಾರಿ ಬಸ್‌ನಲ್ಲಿ ಹಾಲ್ ಟಿಕೆಟ್ ತೋರಿಸಿ, ಉಚಿತ ಪ್ರಯಾಣ ಮಾಡಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದರೆ,ಇನ್ನು ಕೆಲವರು ಬಸ್‌ಗಳಲ್ಲಿ ಬಂದ್ರೆ ಇನ್ನೂ ಕೆಲವರು ಆಟೋಗಳಲ್ಲಿ ಆಗಮಿಸುದರು.
ಬೆಳಗಾವಿ ಜಿಲ್ಲೆಯಲ್ಲಿ 79 ಪರೀಕ್ಷಾ ಕೇಂದ್ರಗಳಿವೆ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 34, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 45 ಪರೀಕ್ಷಾ ಕೇಂದ್ರಗಳಿವೆ.ಬೆಳಗಾವಿ ಜಿಲ್ಲೆಯಲ್ಲಿ 48,171 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು,
ಲ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 34 ಕೇಂದ್ರಗಳಲ್ಲಿ 21,612 ವಿದ್ಯಾರ್ಥಿಗಳು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 45 ಕೇಂದ್ರಗಳಲ್ಲಿ 26,559 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಮಹಾರಾಷ್ಟ್ರ ಸೇರಿ ಬೇರೆ ರಾಜ್ಯದಿಂದ ಬೆಳಗಾವಿಗೆ ಆಗಮಿಸಿದ 76 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದರು. ಬೇರೆ ಜಿಲ್ಲೆಯಿಂದ ಪರೀಕ್ಷೆಗೆ ಆಗಮಿಸಿದ 1569 ವಿದ್ಯಾರ್ಥಿಗಳು ಇಂದು ಇಂಗ್ಲೀಷ್ ಪರೀಕ್ಷೆ ಬರೆದು ನಿರಾಳರಾದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಬೇಂಚ್‌ನಲ್ಲಿ ಓರ್ವ ವಿದ್ಯಾರ್ಥಿ ಕೂರಲು ಅವಕಾಶ ಮಾಡಿ ಕೊಡಲಾಗಿತ್ತು.