ಬೆಳಗಾವಿ- ಬೆಳಗಾವಿ ಕಾಂಟೋನ್ಮೆಂಟ್ ಬೋರ್ಡಿನ ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ತನಿಖೆ ನಡೆಸಿದ ಬೆನ್ನಲ್ಲಿಯೇ ಬೋರ್ಡಿನ ಸಿಇಓ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ CEO ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.ಬೆಳಗಾವಿ ದಂಡುಮಂಡಳಿ ಸಿಇಒ ಕೆ.ಆನಂದ ನಿಗೂಢ ಸಾವನ್ನೊಪ್ಪಿದ್ದಾರೆ.ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿರುವ ಕೆ. ಆನಂದ ಅವರ ಸರ್ಕಾರಿ ನಿವಾಸದಲ್ಲಿ ಈ ಘಟನೆ ನಡೆದಿದೆ.
ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ ಅವರು
ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌ನ ಕೆ. ಆನಂದ ತಮಿಳುನಾಡು ಮೂಲದವರಾಗಿದ್ದರು.
ಇಂದು ಬೆಳಗ್ಗೆ ಮನೆ ಬಾಗಿಲು ತೆಗೆಯದೇ ಇರುವಾಗ ಕ್ಯಾಂಪ್ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಬಾಗಿಲು ತೆಗೆದು ಒಳ ನುಗ್ಗಿದಾಗ ಶವವಾಗಿ ಪತ್ತೆಯಾಗಿರುವ ಕೆ. ಆನಂದ.
ಸ್ಥಳಕ್ಕೆ ಎಂಎಲ್ಐಆರಸಿ ಬ್ರಿಗೇಡಿಯರ್ ಮತ್ತು ಖಡೇಬಜಾರ್ ಎಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ಬೆಳಗಾವಿ ದಂಡ ಮಂಡಳಿ ಮೇಲೆ ಸಿಬಿಐ ದಾಳಿ ನಡೆಸಿತ್ತು.ಅಕ್ರಮ ನೇಮಕಾತಿ ಮತ್ತು ಅಕ್ರಮ ಕಾಮಗಾರಿ ಬಗ್ಗೆ ಖಾಸಗಿ ದೂರು ಹಿನ್ನೆಲೆ ಸಿಬಿಐ ದಾಳಿ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗುದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ