ಬೆಳಗಾವಿ- ಇಂದು ರಾಹುಗ್ರಸ್ತ ಸೂರ್ಯಗ್ರಹಣ ಹಾಗಾಗಿ ಬೆಳಗಾವಿಯ ಜನ,ಗ್ರಹಣ ಬಿಡುವವರೆಗೆ ಮನೆಬಿಟ್ಟು ಹೊರಗೆ ಬರಲೇ ಇಲ್ಲ, ಆದ್ರೆ ಕೆಲವರು ಗ್ರಹಣ ಹಿಡಿದಾಗಲೇ ಬಾಡೂಟ ಮಾಡಿದ್ರು, ಗೋಕಾಕಿನಲ್ಲಿ ಉಪಹಾರ ಸೇವನೆ ಮಾಡಿದ್ರು,ಬೆಳಗಾವಿಯ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆಗಳೂ ನಡೆದವು.
ಬೆಳಗಾವಿಯ ದಕ್ಷಿಣಕಾಶಿ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ನಡೆಯಿತು. ಗ್ರಹಣ ಆರಂಭಕ್ಕೂ ಮುನ್ನ ಶಿವಲಿಂಗ ಶುಚಿಗೊಳಿಸಿ ವಿಶೇಷ ಪೂಜೆ ಮಾಡಲಾಯಿತು. ದೇವಸ್ಥಾನ ಆವರಣದಲ್ಲಿರುವ ಎಲ್ಲ ಮೂರ್ತಿಗಳನ್ನು ಶುಚಿಗೊಳಿಸಿ ಬಟ್ಟೆ ಸುತ್ತಿದರು, ಶಿವಲಿಂಗಕ್ಕೆ ಅಭಿಷೇಕ ಮಾಡಿ ಬಿಲ್ವಪತ್ರೆಗಳಿಂದ ಶಿವಲಿಂಗವನ್ನು ಮುಚ್ಚಿದರು.
ಬೆಳಗಾವಿಯಲ್ಲಿ ಶೇಕಡ 49.12ರಷ್ಟು ಗ್ರಹಣ ಗೋಚರವಾಯಿತು. ಗ್ರಹಣ ಸ್ಪರ್ಶ ಕಾಲ ಬೆಳಗ್ಗೆ 10 ಗಂಟೆ 03 ನಿಮಿಷ ಆರಂಭವಾಯಿತು. ಗ್ರಹಣ ಮಧ್ಯ ಕಾಲ – 11 ಗಂಟೆ 39 ನಿಮಿಷ, ಗ್ರಹಣ ಮೋಕ್ಷ ಕಾಲ 1 ಗಂಟೆ 27 ನಿಮಿಷವಿತ್ತು. ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಗ್ರಹಣ ವೇಳೆ ಯಜ್ಞ ಯಾಗ, ಶಿವನಾಮಸ್ಮರಣೆ ನಡೆಯಿತು. ಗ್ರಹಣ ಸಮಾಪ್ತಿ ಬಳಿಕ ಮತ್ತೆ ದೇವಸ್ಥಾನ ಶುಚಿಗೊಳಿಸಿ ರುದ್ರಾಭಿಷೇಕ ಮಾಡಲಾಯಿತು.
ತಾಮ್ರದ ಪರಾತ್‌ನಲ್ಲಿ ಒನಕೆ ನಿಲ್ಲಿಸಿದ ಕಪಿಲೇಶ್ವರ ದೇವಸ್ಥಾನ ಸಿಬ್ಬಂದಿ, ಗ್ರಹಣ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ಒನಕೆ ನಿಲ್ಲುತ್ತೆ ಎಂಬ ನಂಬಿಕೆ ಈಗಲೂ ಇದೆ ಅನ್ನೋದನ್ನು ತೋರಿಸಿದರು. ಗ್ರಹಣ ಸಮಾಪ್ತಿ ಬಳಿಕ ಒನಕೆ ತನ್ನಿಂದ ತಾನೇ ಬೀಳುತ್ತೆ ಎಂಬ ನಂಬಿಕೆ ಈಗಲೂ ಇದೆ ಎನ್ನುವದಕ್ಕೆ ಕಪಲೇಶ್ವರ ಮಂದಿರದ ಆವರಣ ಸಾಕ್ಷಿಯಾಗಿದೆ.
ರಾಹುಗ್ರಸ್ತ ಸೂರ್ಯಗ್ರಹಣ ಆರಂಭವಾದ ನಂತರ,ಬೆಳಗಾವಿಯ ಜನ ಗ್ರಹಣ ವೀಕ್ಷಣೆ ಮಾಡಿದರು. ಬೆಳಗಾವಿಯ ಶಿವಬಸವನಗರದ ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಎಲ್ಲ ವ್ಯೆವಸ್ಥೆ ಮಾಡಲಾಗಿತ್ತು. ಟೆಲಿಸ್ಕೋಪ್, ಸೋಲಾರ್ ಗ್ಲಾಸ್ ನಿಂದ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.
ಆದ್ರೆ ರಾಹುಗ್ರಸ್ತ ಸೂರ್ಯಗ್ರಹಣ ವೇಳೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉಪಾಹಾರ ಸೇವನೆ ಮಾಡಿ ಎಲ್ಲರ ಗಮನ ಸೆಳೆದರು. ಗೋಕಾಕ್ ನಿವಾಸದಲ್ಲಿ ಪುತ್ರ, ಪುತ್ರಿಯ ಜತೆ,ಗ್ರಹಣ ಸಮಯದಲ್ಲಿ ಉಪಹಾರ ಸೇವಿಸಿ ಮೌಡ್ಯಕ್ಕೆ ಸೆಡ್ಡು ಹೊಡೆದ್ರು.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಗ್ರಹಣ ಮೋಕ್ಷ ವೇಳೆ ಬಾಡೂಟ ಮಾಡಿದ್ರು. ಮೌಢ್ಯತ್ವ ಹೋಗಲಾಡಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಬಾಡೂಟದ ವ್ಯೆವಸ್ಥೆ ಮಾಡಿತ್ತು. ಮಾನವ ಬಂಧುತ್ವ ವೇದಿಕೆಯ ಸಂಚಾಲಕ ರವೀಂದ್ರ ನಾಯ್ಕರ್ ನೇತೃತ್ವದಲ್ಲಿ ಬಾಡೂಟ ಸೇವಿಸುವ ವಿಶಿಷ್ಟ ಆಚರಣೆ ನಡೆಯಿತು. ಮೌಢ್ಯ ವಿರೋಧಿಸಲು ಬಾಡೂಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಚಿಕನ್ ಬಿರ್ಯಾನಿಯನ್ನು 50ಕ್ಕೂ ಹೆಚ್ಚು ಮಾನವ ಬಂಧುತ್ವ ವೇದಿಕೆ ಸದಸ್ಯರು ಸವಿದರು.ಅಷ್ಟೊತ್ತಿಗೆ ಸೂರ್ಯಣ ಗ್ರಹಣ ಬಿಟ್ಟಿತ್ತು.