ಬೆಳಗಾವಿಯ – ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು, ಬಿಗಿ ಪೋಲೀಸ್ ಭದ್ರತೆಯಲ್ಲಿ ಕೊಳಚೆ ಸಂಸ್ಕರಣ ಘಟಕ ಕಾಮಗಾರಿ ಆರಂಭಿಸಿದ್ದಾರೆ.
ಹಲಗಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಮಗಾರಿ ಆರಂಭವಾಗುತ್ತಿದ್ದಂತೆಯೇ,ರೈತರು ಅದಕ್ಕೆ ತೀವ್ರ ಪ್ರತಿರೋಧ ವ್ಯೆಕ್ತ ಪಡಿಸಿದ ಘಟನೆಯೂ ನಡೆಯಿತು.
50 ಕ್ಕೂ ಹೆಚ್ಚು ರೈತರು ಕಾಮಗಾರಿಗೆ ವಿರೋಧ ವ್ಯೆಕ್ತಪಡಿಸಿದಾಗ,ರೈತ ಮುಖಂಡರು ಹಾಗೂ ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಾವು ನಮ್ಮ ಜಮೀನಿನಲ್ಲಿ ಮುಂಗಾರು ಬಿತ್ತನೆ ಮಾಡಿದ್ದೇವೆ.ಇಂತಹ ಸಂಧರ್ಭದಲ್ಲಿ ಕಾಮಗಾರಿ ಆರಂಭಿಸುವದು ಬೇಡ ಎಂದು ರೈತರು ಒತ್ತಾಯಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ರು.
2016 ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ,ಕೇಂದ್ರದ ಅಮೃತ ಯೋಜನೆಯಲ್ಲಿ 160 ಕೋಟಿ ರೂ ವೆಚ್ಚದಲ್ಲಿ,ಹಲಗಾ ಬಳಿ ಕೊಳಚೆ ಸಂಸ್ಕರಣ ಘಟಕ ಮತ್ತು ಒಳಚರಂಡಿ ನಿರ್ಮಿಸಲು ನಿರ್ಧರಿಸಿ ಟೆಂಡರ್ ಪ್ರಕ್ರಿಯೆ ಮುಗಿಸಿದ್ದರು.
ಆದರೆ 2016 ರಲ್ಲಿ ರೈತರು ಕೊಳಚೆ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ವಿರೋಧ ವ್ಯೆಕ್ತಪಡಿಸಿದ ಹಿನ್ನಲೆಯಲ್ಲಿ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ಈಗ ಟೆಂಡರ್ ಪ್ರಕ್ರಿಯೆ ಮುಗಿದು,ಬಿಗಿ ಪೋಲೀಸ್ ಭದ್ರತೆಯಲ್ಲಿ ಒಂದು ಕಡೆ ಕಾಮಗಾರಿ ಆರಂಭವಾದರೆ,ಇನ್ಮೊಂದು ಕಡೆ ರೈತರ ಪ್ರತಿಭಟನೆ ಮುಂದುವರೆದಿದೆ.