ಬೆಳಗಾವಿ- ಜಲಸಂಪನ್ಮೂಲ, ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಲಿದ್ದಾರೆ.
ಸೋಮವಾರ ಬೆಳಿಗ್ಗೆ ಬೆಳಿಗ್ಗೆ ಬೆಳಗಾವಿಗೆ ಆಗಮಿಸುವ ಅವರು ಬೆಳಿಗ್ಗೆ 11-00 ಗಂಟೆಗೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬೆಳಗಾವಿ,ಮಹಾನಗರಪಾಲಿಕೆ,ಬೆಳಗಾವಿ ನಗರಾಭಿವೃದ್ಧ ಪ್ರಾಧಿಕಾರ,ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಶೀಲನೆ ಮಾಡಲಿದ್ದಾರೆ.
ಸಭೆ ಮುಗಿದ ಬಳಿಕ ಮದ್ಯಾಹ್ನ 1 ಗಂಟೆಯ ನಂತರ ಸಚಿವ ರಮೇಶ್ ಜಾರಕಿಹೊಳಿ ಅವರು,ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಲಿದ್ದಾರೆ.
ಇತ್ತೀಚಿಗೆ ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಸಮೀತಿಯ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆ ಮುಗಿದಿದೆ.ಕಾಂಗ್ರೆಸ್ಸಿನ ಹಿರಿಯ ಮುಖಂಡ,ಮರಾಠಾ ಸಮಾಜದ ಪ್ರಭಾವಿ ನಾಯಕರೂ ಆಗಿರುವ ಯುವರಾಜ್ ಕದಂ ಅವರು ಎಪಿಎಂಸಿ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಬೆನ್ನಲ್ಲಿಯೇ ಸಚಿವ ರಮೇಶ್ ಜಾರಕಿಹೊಳಿ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡುತ್ತಿರುವ ವಿಷಯ ಎಲ್ಲರಲ್ಲಿ ಕುತೂಹಲ ಕೆರಳಿಸಿದೆ.
ಈ ಹಿಂದೆ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಯುವರಾಜ್ ಕದಂ ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದರು,ಯವರಾಜ ಕದಂ ಅದ್ಯಕ್ಷರಾದ ಬಳಿಕ ರಮೇಶ್ ಜಾರಕಿಹೊಳಿ ಅವರು ಎಪಿಎಂಸಿಗೆ ಹೋಗುತ್ತಿರುವದು ವಿಶೇಷವಾಗಿದೆ.
ಎಪಿಎಂಸಿ ಅದ್ಯಕ್ಷ ಯುವರಾಜ್ ಕದಂದ ಅವರು ಸೋಮವಾರ ಎಪಿಎಂಸಿ ಗೆಸ್ಟ್ ಹೌಸ್ ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ,ಸೋಮವಾರ ಮಧ್ಯಾಹ್ನ ಔತನಕೂಟವನ್ನು ಏರ್ಪಡಿಸಿದ್ದಾರೆ,ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.