ಎಂಇಎಸ್ ,ಪುಂಡರ ಪುಂಡಾಟಿಕೆ ನೋಡಿದ್ರೆ, ಕನ್ಡಡಿಗರ ರಕ್ತ ಕುದಿಯುತ್ತೆ…!!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಮರಾಠಿಯಲ್ಲಿ ಬೋರ್ಡ್ ಹಾಕಿದವರ ಜೊತೆ ವ್ಯವಹಾರ ಮಾಡಬೇಕು,ಕನ್ನಡ ಫಲಕ ಹಾಕುವ ಕನ್ನಡ ಸಂಘಟನೆಗಳ ಹೋರಾಟ ತಡೆಯಬೇಕು‌ ಎಂದು ಆಗ್ರಹಿಸಿ ಎಂಇಎಸ್ ಪುಂಡರು ಬರುವ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಪುಂಡಾಟಿಕೆಯ ನಿರ್ಧಾರ ಕೈಗೊಂಡಿದ್ದಾರೆ‌.

ಎಂಇಎಸ್ ನಾಯಕರ ಪುಂಡಾಟಿಕೆ,ನಾಡ ವಿರೋಧಿ ಮಾತುಗಳನ್ನು ಕೇಳಿದ್ರೆ,ರಾಜ್ಯದಲ್ಲಿ ಕನ್ನಡದ ಸರ್ಕಾರ ಸತ್ತಿದೆಯೋ,? ಜೀವಂತವಾಗಿದೆಯೋ ? ಎನ್ನುವ ಅನುಮಾನ ಕನ್ನಡಿಗರನ್ನು ಕಾಡುತ್ತಿದೆ. ಯಾಕಂದ್ರೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕನ್ನಡ ವಿರೋಧಿ ನಿರ್ಣಯ ಕೈಗೊಂಡು ನಾಡವಿರೋಧಿ ಹೇಳಿಕೆಗಳನ್ನು ಹೇಳಿದ್ರೂ ಸರ್ಕಾರ ಇವರಿಗೆ ಲಗಾಮು ಹಾಕುವ ದಿಟ್ಟ ಕ್ರಮ ಕೈಗೊಳ್ಳದಿರುವದು ದುರ್ದೈವದ ಸಂಗತಿಯಾಗಿದೆ.

ಯಾವುದೇ ಇಲೆಕ್ಷನ್ ಬರಲಿ ಎಂಇಎಸ್ ನಾಯಕರು ಬಾಲ ಬಿಚ್ಚುತ್ತಾರೆ.ಮುಗ್ದ ಮರಾಠಿಗರನ್ನು ಪ್ರಚೋದಿಸಿ ಮಹಾರಾಷ್ಟ್ರ ಸರ್ಕಾರದ ಎದುರು ಮೊಸಳೆ ಕಣ್ಣೀರು ಸುರಿಸಿ ಕಲೆಕ್ಷನ್ ಮಾಡುವದು ಎಂಇಎಸ್ ನಾಯಕರ ಚಾಳಿ, ಈಗ ಲೋಕಸಭೆ ಚುನಾವಣೆ ಬಂದಿದೆ.ಬೆಳಗಾವಿಯ ಎಂಇಎಸ್ ನಾಯಕರು ಮುಂಬಯಿಗೆ ತೆರಳಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಆಗ್ತೇವೆ.ಕರ್ನಾಟಕ ಸರ್ಕಾರದ ವಿರುದ್ಧ ಕಂಪ್ಲೇಂಟ್ ಮಾಡ್ತೀವಿ ಎಂದು ಮಾಜಿ ಶಾಸಕ ಮನೋಹರ್ ಕಿಣೇಕರ್ ಹೇಳಿದ್ದಾರೆ.

ಮನೋಹರ ಕಿಣೇಕರ್,ವಿಕಾಸ್ ಕಲಘಟಗಿ ಸೇರಿದಂತೆ ಹಲವಾರು ಜನ ಎಂಇಎಸ್ ನಾಯಕರು ಬರುವ ಮಂಗಳವಾರ ಪ್ರತಿಭಟನೆ ಮಾಡಿ ಕನ್ನಡ ಕಡ್ಡಾಯಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ ಮಾಡುವದಾಗಿ ಹೇಳಿದ್ದು ಇವರನ್ನು ಸರ್ಕಾರ ಗಡಿಪಾರು ಮಾಡಿ ಮಹಾರಾಷ್ಟ್ರಕ್ಕೆ ಕಳುಹಿಸಲು ಕರ್ನಾಟಕ ಸರ್ಕಾರ ಮುಂದಾಗಲಿ.

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *