ಬೆಳಗಾವಿ-ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಬೆಳಗಾವಿ ಜಿಲ್ಲೆಯ 573 ಜನ ಶಂಕಿತರ ವಿರುದ್ಧ ಕೇಸ್ ಹಾಕಲು ಕ್ವಾರಂಟೈನ್ ನೂಡಲ್ ಅಧಿಕಾರಿಗಳು,ಜಿಲ್ಲೆಯ ಉಪವಿಭಾಗಾಧಿಕಾರಿಗಳು,ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ಮತ್ತು ಪಕ್ಕದ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಬಂದಿರುವ 573 ಜನ ಹೋಮ್ ಕ್ವಾರಂಟೈನ್ ನಲ್ಲಿ ಇರದೇ ಸುತ್ತಾಡಿದ್ದು ಇವರನ್ನು ಟ್ರ್ಯಾಕ್ ಮಾಡಿರುವ ಕ್ವಾರಂಟೈನ್ ಅಧಿಕಾರಿಗಳು,ನಿಯಮ ಉಲ್ಲಂಘನೆ ಮಾಡಿರುವ 573 ಜನರ ಪಟ್ಟಿ ಮಾಡಿ,ಬೆಳಗಾವಿ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ,ಮತ್ತು ತಹಶೀಲ್ದಾರುಗಳಿಗೆ ರವಾನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಆಯಾ ತಾಲ್ಲೂಕುಗಳ ತಹಶೀಲ್ದಾರರು ತಮ್ಮ ತಾಲ್ಲೂಕುಗಳಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರನ್ನು ಗುರುತಿಸಿ,ಅವರನ್ನು ಪುನಃ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ ಮಾಡಿ,ಅವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಿದ್ದಾರೆ.
ಬೆಳಗಾವಿ ನಗರ -76
ಬೆಳಗಾವಿ ಗ್ರಾಮೀಣ -103 ,ಹುಕ್ಕೇರಿ 55,ಖಾನಾಪೂರ 54,ಬೈಲಹೊಂಗಲ 28,ಸವದತ್ತಿ 15,ರಾಮದುರ್ಗ11 ಗೋಕಾಕ 45,ಮೂಡಲಗಿ 13 ಅಥಣಿ 37ಕಾಗವಾಡ 16 ಚಿಕ್ಕೋಡಿ 30 ನಿಪ್ಪಾಣಿ 48,ರಾಯಬಾಗ 24, ಕಿತ್ತೂರು 18 ಹೀಗೆ ಜಿಲ್ಲೆಯಲ್ಲಿ ಒಟ್ಡು 573 ಜನರು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದು ಇವರ ವಿರುದ್ಧ ಎಫ್ ಐ ಆರ್ ದಾಖಲು ಮಾಡುವ ಜೊತೆಗೆ ಇವರನ್ನು ಪುನಃ ಕ್ವಾರಂಟೈನ್ ಮಾಡಲಾಗುತ್ತಿದೆ.