ಬೆಳಗಾವಿ- ಬೆಳಗಾವಿ ನಗರದಲ್ಲಿ ಕೊರೋನಾ ವೈರಸ್ ಚೆಲ್ಲಾಟ ನಡೆಸಿದೆ. ಇಲ್ಲಿಯ ಗುಡ್ ಶೆಡ್ ರಸ್ತೆಯ 74 ವರ್ಷದ ವ್ಯೆಕ್ತಿ ಉಸಿರಾಟದ ತೊಂದರೆಯಿಂದಾಗಿ ಭೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಇಂದು ಬೆಳಿಗ್ಗೆ ಈ ವ್ಯೆಕ್ತಿ ಮೃತಪಟ್ಟಿದ್ದು ಈತನಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.
ಗುಡ್ ಶೆಡ್ ರಸ್ತೆ ನಿವಾಸಿಯಾಗಿದ್ದ 74 ವರ್ಷದ ವ್ಯೆಕ್ತಿಗೆ ನಿನ್ನೆ ಮಧ್ಯಾಹ್ನ ಉಸಿರಾಟದ ತೊಂದರೆಯಾದ ಕಾರಣ ಇತನನ್ನು ಸ್ಥಳೀಯ ವೈದ್ಯರಿಗೆ ತೋರಿಸಿದಾಗ ವೈದ್ಯರು ಭೀಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ವೈಸ್ಯರು ಶಿಫಾರಸ್ಸು ಮಾಡಿದ್ದರು,ಭೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ.
ನಿನ್ನೆ ಮದ್ಯಾಹ್ನವೇ ಇತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು,ಇಂದು ಈತನ ರಿಪೋರ್ಟ್ ಬೆಳಗಾವಿ ಜಿಲ್ಲಾಡಳಿತಕ್ಕೆ ತಲುಪಿದ್ದು ಈತನಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.
ಕೊರೋನಾ ಸೊಂಕಿನಿಂದ ಮೃತಪಟ್ಟಿರುವ 74 ವರ್ಷದ ವ್ಯೆಕ್ತಿ ಜೂನ್ 17 ರಂದು ಬೆಳಗಾವಿಗೆ ಆಗಮಿಸಿದ್ದ,ಇಂದು ಈತನಿಗೆ ಸೊಂಕು ಇರುವದು ದೃಡವಾಗಿರುವದರಿಂದ ಮೃತ ವ್ಯೆಕ್ತಿಯ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಮೂರು ಜನ ಬಲಿಯಾಗಿದ್ದಾರೆ. ಹಿರೇಬಾಗೇವಾಡಿಯ 84 ವರ್ಷದ ವೃದ್ದೆ,ಅಥಣಿ ತಾಲ್ಲೂಕಿನ 32 ವರ್ಷದ ಯುವಕ ಬಲಿಯಾಗಿದ್ದು ಇಂದು ಬೆಳಗಾವಿ ನಗರದ ಗುಡ್ ಶೆಡ್ ರಸ್ತೆಯ 74 ವರ್ಷದ ವ್ಯೆಕ್ತಿ ಬಲಿಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಮೂರು ಜನ ಬಲಿಯಾಗಿದ್ದು ಬೆಳಗಾವಿ ನಗರದಲ್ಲೂ ಕೊರೋನಾ ಮರಣ ಮೃದಂಗ ಶುರುವಾಗಿದ್ದು ಬೆಳಗಾವಿ ನಗರದಲ್ಲಿ ಆತಂಕ ಸೃಷ್ಟಿಸಿದೆ
ಇಙದು ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ.ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ತೆ 336 ಕ್ಕೆ ಏರಿದಂತಾಗಿದೆ.