ಬೆಳಗಾವಿ-ಬೆಳಗಾವಿಯಲ್ಲಿ ಸಾವನ್ನೊಪ್ಪಿದ ತಾಯಿಯ ಅಂತ್ಯಕ್ರಿಯೆಯನ್ನು ಮಹಾರಾಷ್ಟ್ರದ ಕೊಲ್ಹಾಪುರ ದಲ್ಲಿ ಮುಗಿಸಿ ಬೆಳಗಾವಿಗೆ ಮರಳಿ ಬಂದು,ನಗರದ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಆಗಿರುವ ಬೆಳಗಾವಿಯ ಪ್ರಸಿದ್ಧ ಮರಾಠಿ ಸಾಹಿತಿಯೊಬ್ಬರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಕೊಲ್ಹಾಪೂರ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಲೀಕ್ ಮಾಡಿದ್ದರಿಂದ ಸಾರ್ವಜನಿಕವಾಗಿ ಅವಮಾನವಾಗಿದ್ದು,ಕೂಡಲೇ ಪತ್ರವನ್ನು ಬಹಿರಂಗ ಪಡಿಸಿದ ಅಧಿಕಾರಿಗಳ ಕ್ರಮ ಜರುಗಿಸಬೇಕೆಂದು ಬೆಳಗಾವಿಯ ಪ್ರಸಿದ್ಧ ಮರಾಠಿ ಸಾಹಿತಿ ಈಗ ಪೋಲೀಸರ ಮೊರೆ ಹೋಗಿದ್ದಾರೆ.
ಇಪ್ಪತ್ತು ದಿನಗಳ ಹಿಂದೆ ಬೆಳಗಾವಿಯ ಮರಾಠಿ ಸಾಹಿತಿಯಿಬ್ಬರ ತಾಯಿ ನಿಧನರಾದರು,ತಾಯಿಯ ಪಾರ್ಥೀವ ಶರೀರವನ್ನು ಅಂಬ್ಯುಲೆನ್ಸ್ ನಲ್ಲಿ ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಮುಗಿಸಿ ಅದೇ ಅಂಬ್ಯುಲೆನ್ಸ್ ನಲ್ಲಿ ಬೆಳಗಾವಿಗೆ ಮರಳಿದ್ದರು.
ತಾಯಿಯ ಅಂತ್ಯಕ್ರಿಯೆ ಮುಗಿಸಿ ಬೆಳಗಾವಿಗೆ ಮರಳಿದ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಬೆಳಗಾವಿಯ ಈ ಮರಾಠಿ ಸಾಹಿತಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಮಾಡಿಸಿಕೊಂಡಿದ್ದರು
ತಾಯಿಯ ಅಂತ್ಯಕ್ರಿಯ ಮುಗಿದ ಇಪ್ಪತ್ತು ದಿನಗಳ ಬಳಿಕ ಕೊಲ್ಹಾಪೂರದಲ್ಲಿದ್ದ ಬೆಳಗಾವಿ ಸಾಹಿತಿಯ ಸಹೋದರನಿಗೆ ಕೊರೋನಾ ಪಾಸಿಟೀವ್ ರಿಪೋರ್ಟ್ ಬಂದ ಹಿನ್ನಲೆಯಲ್ಲಿ ಕೊಲ್ಲಾಪೂರ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬೆಳಗಾವಿಯ ಮರಾಠಿ ಸಾಹಿತಿಯ ಮೇಲೆ ನಿಗಾ ಇಡುವಂತೆ ಕೋರಿಕೊಂಡಿದ್ದರು,ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕೊಲ್ಹಾಪೂರದಿಂದ ಬಂದ ಈ ಪತ್ರ ಬೆಳಗಾವಿ ಮಹಾನಗರ ಪಾಲಿಕೆಗೆ ಪಾರವರ್ಡ್ ಆಗಿತ್ತು.ಈ ಪತ್ರದಲ್ಲಿ ಸಾಹಿತಿಯ ಹೆಸರು,ಅಡ್ರೆಸ್ ಎಲ್ಲವನ್ನೂ ನಮೂದಿಸಲಾಗಿತ್ತು.
ಈ ಪತ್ರ ಸೋಶಿಯಲ್ ಮಿಡಿಯಾದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿತ್ತು.ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ನೆಲೆಸಿರುವ ಈ ಮರಾಠಿ ಸಾಹಿತಿಯನ್ನು ಈಗ ಬೆಳಗಾವಿಯ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕ್ವಾರಂಟೈನ್ ನಲ್ಲಿರುವ ಪ್ರಸಿದ್ಧ ಮರಾಠಿ ಸಾಹಿತಿ ಈಗ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯೆಕ್ತ ಪಡಿಸಿದ್ದು ನನ್ನ ಹೆಸರು ಮತ್ತು ಅಡ್ರೆಸ್ ನಮೂದಿಸಿರುವ ಪತ್ರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಕಾರಣ ನನಗೆ ಮತ್ತು ನನ್ನ ಕುಟುಂಬದವರಿಗೆ ಸಾಮಾಜಿಕವಾಗಿ ಅವಮಾನವಾಗಿದೆ.ಈ ಪತ್ರವನ್ನು ಬಹಿರಂಗ ಪಡಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಮರಾಠಿ ಸಾಹಿತಿ ಈಗ ಪೋಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಕ್ವಾರಂಟೈನ್ ನಲ್ಲಿ ಇದ್ದುಕೊಂಡೇ ಬೆಳಗಾವಿಯ ಮರಾಠಿ ಸಾಹಿತಿ ತಮಗಾಗಿರುವ ಸಾಮಾಜಿಕ ಅವಮಾನದ ವಿರುದ್ಧ ಸಮರ ಸಾರಿದ್ದಾರೆ.