ಬೆಳಗಾವಿ-ಕೊರೋನಾ ಸೊಂಕು ಬೆಳಗಾವಿ ಜಿಲ್ಲೆಯಲ್ಲಿ ಮೃತ್ಯುತಾಂಡವ ನಡೆಸಿದೆ ಈ ಮಹಾಮಾರಿ ಸೊಂಕಿಗೆ ಇಂದು ಮತ್ತೊಬ್ಬ ಬಲಿಯಾಗಿದ್ದಾನೆ.
ಕೊರೋನಾ ಸೊಂಕಿಗೆ ಬೆಳಗಾವಿ ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು ನಾಲ್ಕು ಜನ ಬಲಿಯಾಗಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಅಥಣಿ ನಗರದ 45 ವರ್ಷದ ವ್ಯೆಕ್ತಿಯೊಬ್ಬ ಬಲಿಯಾಗಿದ್ದು ನಗರದಲ್ಲಿ ಕೊರೋನಾ ಮರಣಮೃದಂಗ ಮುಂದುವರೆದಿದೆ.
ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 7 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 343 ಕ್ಕೆ ಏರಿದಂತಾಗಿದೆ
ಇಂದು ಪತ್ತೆಯಾದ 7 ಜನರಲ್ಲಿ ಬೆಳಗಾವಿ ನಗರದ ,ಮಹಾಂತೇಶ ನಗರ,ಬೋವಿಗಲ್ಲಿ,ಮತ್ತು ವಡಗಾವಿಯಲ್ಲಿ ತಲಾ ಒಬ್ಬರು ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಪತ್ತೆಯಾದ 7 ಜನರ ಪೈಕಿ ಬೆಳಗಾವಿ ನಗರದ 46 ವರ್ಷದ ಕೆಎಸ್‌ಆರ್‌ಪಿ ಪೇದೆಗೆ ಕೊರೊನಾ ದೃಢವಾಗಿದೆ.ಈತ ನಿಪ್ಪಾಣಿಯ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇಂದು ಬಿಡುಗಡೆಯಾದ ಬುಲಿಟೀನ್ ನಲ್ಲಿ ಪೋಲೀಸ್ ಪೇದೆಗೂ ಸೊಂಕು ದೃಡವಾಗಿದೆ.
ಮಹಾರಾಷ್ಟ್ರ ಗಡಿಯಲ್ಲಿರುವ ಕೊಗನೊಳ್ಳಿ ಚೆಕ್‌ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ ಈ ಪೇದೆ ಕ್ವಾರಂಟೈನ್‌ನಲ್ಲಿದ್ದ ಎಂದು ತಿಳಿದು ಬಂದಿದೆ. ಜೂನ್ 30ರಂದು ಕೆಎಸ್‌ಆರ್‌ಪಿ ಪೇದೆಯ ಥ್ರೋಟ್ ಸ್ವ್ಯಾಬ್ ಪಡೆಯಲಾಗಿತ್ತು, ಇಂದು ಬಂದ ವರದಿಯಲ್ಲಿ P-17021 46 ವರ್ಷದ ಪೇದೆಗೆ ಸೋಂಕು ದೃಢವಾಗಿದೆ.
ಇಂದು ಪತ್ತೆಯಾದ 7 ಸೊಂಕಿತರಲ್ಲಿ 4 ಜನ ಬೆಳಗಾವಿ ನಗರದವರಾಗಿದ್ದು,ಗೋಕಾಕಿನಲ್ಲಿ 8 ವರ್ಷದ ಬಾಲಕಿ ಮತ್ತು ಸವದತ್ತಿ ತಾಲ್ಲೂಕಿನವರು ಒಬ್ಬರು ಸೊಂಕಿತರು ಪತ್ತೆಯಾಗಿದ್ದಾರೆ ಇಂದು ಬಲಿಯಾದ ವ್ಯೆಕ್ತಿ ಅಥಣಿ ತಾಲ್ಲೂಕಿನ ಶಿವನೇರಿ ಗ್ರಾಮದವರಾಗಿದ್ದಾರೆ.