ಬೆಳಗಾವಿ – ಬೆಳಗಾವಿಯಲ್ಲಿ ಡಾ.ಸರ್ನೋಬತ್ ದಂಪತಿಗಳು ನೀಯತಿ ಫೌಂಡೇಶನ್ ಮೂಲಕ ಸದ್ದಿಲ್ಲದೇ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಆರ್ಥಿಕವಾಗಿ ದುರ್ಬಲವಾಗಿರುವ ಶಾಲಾ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಡಾ.ಸೋನಾಲಿ ಸರ್ನೋಬತ್ ಡಾ.ಸಮೀರ್ ಸರ್ನೋಬತ್ ದಂಪತಿಗಳು ನೀಯತಿ ಎಂಬ ಫೌಂಡೇಶನ್ ಮೂಲಕ ಈಗಾಗಲೇ 200 ಕ್ಕೂ ಹೆಚ್ಚು ಅಸಹಾಯಕ ವಿಧ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಸಹಾಯ ಮಾಡುವದರ ಜೊತೆಗೆ ಅನೇಕ ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನೂ ಸಹ ಕೊಟ್ಟಿದ್ದಾರೆ.
ಈ ಹಿಂದೆ ಬಡ ವಿಧ್ಯಾರ್ಥಿಯೊಬ್ಬ ವಿಜ್ಞಾನದ ವ್ಯಾಸಂಗಕ್ಕಾಗಿ PHD ಮಾಡಲು ಥೈವಾನ್ ಗೆ ಹೋಗಬೇಕಾಗಿತ್ತು ಈ ವಿಧ್ಯಾರ್ಥಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಡಾ. ಸೋನಾಲಿ ಸರ್ನೋಬತ್ ಹಾಗೂ ಸಮೀರ್ ಸರ್ನೋಬತ್ ಅವರು ವಿದ್ಯಾರ್ಥಿಗೆ ಥೈವಾನ್ ಗೆ ಹೋಗಲು 50 ಸಾವಿರ ರೂ ಆರ್ಥಿಕ ಸಹಾಯ ಮಾಡಿದ್ದರು. ಈ ವಿದ್ಯಾರ್ಥಿ ಈಗ ಉನ್ನತ ವ್ಯಾಸಂಗ ಮಾಡಿ, ಆರ್ಥಿಕವಾಗಿ ಸದೃಢವಾಗಿದ್ದು ಆತ ಈಗ ನೀಯತಿ ಫೌಂಡೇಶನ್ ಮೂಲಕ ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಮಾಡುತ್ತಿದ್ದಾನೆ ಇದು ನೀಯತಿ ಫೌಂಡೇಶನ್ ಇಂಪ್ಯಾಕ್ಟ್.
ಕೋವೀಡ್ ಸಂಧರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಆಹಾರ ಸಾಮುಗ್ರಿಗಳ ಕಿಟ್ ವಿತರಣೆ ಮಾಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ.ಆದ್ರೆ ಡಾ.ಸರ್ನೋಬತ್ ದಂಪತಿಗಳು ಗೋ ಶಾಲೆಗಳಿಗೆ, ಬೆಳಗಾವಿ ನಗರದಲ್ಲಿ ಇರುವ ಜಾನುವಾರಗಳಿಗೆ ಟ್ರಕ್ ಗಟ್ಟಲೇ ಮೇವು ವಿತರಿಸುವ ಮೂಲಕ ಮಾನವೀಯ ಸೇವೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ನೀಯತಿ ಪೌಂಡೇಶನ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಜೊತೆಗೆ ಅನೇಕ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಸ್ಪರ್ದೆಗಳಲ್ಲಿ ಭಾಗವಹಿಸಲು ಆರ್ಥಿಕ ಸಹಾಯವನ್ನೂ ಮಾಡುವ ಮೂಲಕ ನೀಯತಿ ಪೌಂಡೇಶನ್ ಬೆಳಗಾವಿಯಲ್ಲಿ ನೀಯತ್ತಿನ ಸಾಮಾಜಿಕ ಸೇವೆ ಮಾಡುತ್ತಿದೆ.ಅವರ ಸೇವೆ ಇತರರಿಗೆ ಮಾದರಿಯಾಗಲಿ ಸರ್ನೋಬತ್ ದಂಪತಿಗಳಿಗೆ ಶುಭವಾಗಲಿ..