ಬೆಳಗಾವಿ-ಗೋಕಾಕ್ ತಾಲ್ಲೂಕಿನಕನಸಗೇರಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಹಲವಾರು ಜನ ಅಸ್ವಸ್ಥಗೊಂಡಿದ್ದು,ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವನ್ನೊಪ್ಪಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದಹೊಳೆವ್ವಾ ಬಾಳಪ್ಪ ಧನದವರ(38) ಮೃತ ಮಹಿಳೆ ಎಂದು ಗುರುತಿಸಲಾಗಿದೆ.ಬಾವಿಯ ನೀರು ಸೇವಿಸಿ ಹತ್ತು ಜನ ಅಸ್ವಸ್ಥಗೊಂಡಿದ್ದರು.ವಾಂತಿಬೇಧಿ ಕಾಣಿಸಿಕೊಂಡ ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನುಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾಳೆ.
ನಿನ್ನೆ ಸಂಜೆ ಸಾವನ್ನಪ್ಪಿರುವ ಹೊಳೆವ್ವಾ.ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದ ಡಿಎಚ್ಒ.ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಪರಿಶೀಲನೆ ಮಾಡಿದ್ದಾರೆ.
ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಗಾಮದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ