ಮನೆಗಳ್ಳತನ ಪ್ರಕರಣದಲ್ಲಿ ಎರಡು ಜನ ಆರೋಪಿತರ ಬಂಧನ

ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಉಪ ಪೊಲೀಸ್ ಆಯುಕ್ತರು (ಅ&ಸಂ) ಮತ್ತು ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ್ ಠಾಣೆ ಇನ್ಸಪೇಕ್ಟರ್ ಹಾಗೂ ಕ್ಯಾಂಪ್ ಪೊಲೀಸ್ ಇನ್ಸಪೇಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ: 09/07/2024 ರಂದು ಎರಡು ಜನ ಆರೋಪಿತರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಸದರಿ ಆರೋಪಿತರಾದ1. ಚೇತನ ಮಾರುತಿ ಶಿಂದೆ 26 y ಸಾ| ಕಿನೆಯೇ ಹಾಲಿ | ಗಣೇಶಪುರ ಬೆಳಗಾವಿ2.ಕರಣ್ ಉತ್ತಮ ಮುತಗೇಕರ್ 27 y ಸಾ |ರಘುನಾಥ್ ಪೇಟ್ ಅನಗೋಳ ಬೆಳಗಾವಿ ಇವರಿಂದ,ಬೆಳಗಾವಿ ನಗರದ ಖಡೇಬಜಾರ, ಕ್ಯಾಂಪ್ ಮತ್ತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಒಟ್ಟು ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ,1) 77 ಗ್ರಾಂ ಬಂಗಾರದ ಆಭರಣಗಳು, ಅ.ಕಿ: 5,54,400/-ರೂ2) 200 ಗ್ರಾಂ ಬೆಳ್ಳಿಯ ಆಭರಣಗಳು, ಅ.ಕಿ: 20,000/-ರೂ3) ಲ್ಯಾಪಟಾಪ್ ಒಂದು, ಅ.ಕಿ: 20,000/- ರೂ4) ಮೊಬೈಲ್ ಒಂದು, ಅ.ಕಿ: 3,000/- ರೂ5) ನಗದು ಹಣ, 10,000/- ರೂಹೀಗೆ ಒಟ್ಟು 6,07,000/-ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣದ ತನಿಖೆಯನ್ನು ಮುಂದುವರೆಸಿರುತ್ತಾರೆ.

ಸದರಿ ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಖಡೇಬಜಾರ ಉಪ ವಿಭಾಗದ ಎಸಿಪಿ ರವರಾದ ಶ್ರೀ ಶೇಖರಪ್ಪ ಎಚ್, ರವರ ಮಾರ್ಗದರ್ಶನದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಖಡೇಬಜಾರ ಪೊಲೀಸ್ ಠಾಣೆಯ ಇನ್ಸಪೇಕ್ಟರ ಶ್ರೀ ಡಿ ಪಿ ನಿಂಬಾಳಕರ ಮತ್ತು ಕ್ಯಾಂಪ ಪೊಲೀಸ್ ಠಾಣೆಯ ಇನ್ಸಪೇಕ್ಟರ ಶ್ರೀ ಅಲ್ತಾಫ ಮುಲ್ಲಾ, ಪಿಎಸ್ಐ ಶ್ರೀ ಆನಂದ ಆದಗೊಂಡ ಮತ್ತು ಸಿಬ್ಬಂದಿ ಜನರಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಎಮ್ ವಿ ಅರಳಗುಂಡಿ, ಎಸ್ ಎಚ್ ತಳವಾರ, ಎಸ್ ಬಿ ಬರಗಿ, ಬಿ ಎಲ್ ಸರವಿ, ವಿ ವಾಯ್ ಗುಡಿಮೇತ್ರಿ, ಜಿ ಪಿ ಅಂಬಿ, ಎಸ್ ಬಿ ಭೂಸನೂರಮಠ ಹಾಗೂ ಬೆರಳು ಮುದ್ರ ಘಟಕದ ಸಿಬ್ಬಂದಿ ಜನರು ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ ಎಸ್ ಅಕ್ಕಿ, ಮಹಾದೇವ ಕಾಶೀದ ರವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಉಪ ಪೊಲೀಸ್ ಆಯುಕ್ತರು (ಕಾ&ಸು) ಮತ್ತು ಉಪ ಪೊಲೀಸ್ ಆಯುಕ್ತರು (ಅ &ಸಂ) ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.

Check Also

ಬೆಳಗಾವಿ -ಸಾಲಭಾದೆಗೆ ನೇಕಾರ ಆತ್ಮಹತ್ಯೆ

ಬೆಳಗಾವಿ-ಸಾಲಭಾದೆಗೆ ಬೇಸತ್ತು ನೇಣುಬಿಗಿದುಕೊಂಡು ನೇಕಾರ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ. ಪರುಶರಾಮ ವಾಗೂಕರ (47) …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.