ಬೆಂಗಳೂರು : ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿರುವ ಡಾ.ಸೋನಾಲಿ ಸರ್ನೋಬತ್ ಅವರು ನೀಯತಿ ಫೌಂಡೇಶನ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ರೀಯಾಶೀಲ ಬಿಜೆಪಿ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಸೇವೆಯನ್ನು ಗುರುತಿಸಿ ಅವರಿಗೆ ಪಕ್ಷ ಈಗ ರಾಜ್ಯಮಟ್ಟದ ಜವಾಬ್ದಾರಿ ನೀಡಿದೆ.
ಬೆಳಗಾವಿಯ ಬಿಜೆಪಿ ಮಹಿಳಾ ನಾಯಕಿ ಹಾಗೂ ಖ್ಯಾತ ವೈದ್ಯೆ ಡಾ. ಸೋನಾಲಿ ಸರ್ನೋಬತ್ ಅವರನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಸೋನಾಲಿ ಅವರು ಈ ಹಿಂದೆ ಜಿಲ್ಲಾ ವಿಭಾಗದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದರು. ಸಧ್ಯ ಇವರ ಕಾರ್ಯವೈಖರಿ ಗುರುತಿಸಿರುವ ಪಕ್ಷ ಮಹತ್ವದ ಜವಾಬ್ದಾರಿ ನೀಡಿದೆ.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ ಡಾ. ಸೋನಾಲಿ ಅವರನ್ನು ಆಯ್ಕೆಯಾದ ಹಿನ್ನಲೆಯಲ್ಲಿ ಅಭಿಮಾನಿಗಳು ಶುಭಾಶಯ ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ಜವಾಬ್ದಾರಿ ನೀಡಿರುವ ಪಕ್ಷದ ನಾಯಕರಿಗೆ ಡಾ. ಸೋನಾಲಿ ಕೃತಜ್ಞತೆ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ

