ಬೆಳಗಾವಿ ಹುಡುಗ ರೋಹೀತ್ ಕೋಲಕಾರ್ ಜೊತೆ ಮದುವೆಯಾದ ಪ್ರೀಯಾಂಕಾ ಗೌಡ…
ಬೆಳಗಾವಿ-ಒಬ್ಬರ ಜೋತೆ ಅರೇಂಜ್ ಮ್ಯಾರೇಜ್ ಇನ್ನೊಬ್ಬನ ಜೊತೆ ಮದುವೆ ಇನ್ಸಟಾ ಗ್ರಾಮಲ್ಲಿ ಲವ್ವಿ ಡವ್ವಿ ಒಟ್ಟು ಮೂರು ಮದುವೆ ಮೋಸದ ಮೇಲೊಂದು ಮೋಸ, ಈ ರೀತಿಯ ಘಟನೆ ನಡೆದಿದ್ದು ಕುಂದಾನಗರಿ ಬೆಳಗಾವಿಯಲ್ಲಿ.
ಬೆಂಗಳೂರಿನ ಪ್ರಿಯಾಂಕಾ ಗೌಡ, ಬೆಳಗಾವಿಯ ರೋಹೀತ್ ಕೋಲಕಾರ ಇಬ್ಬರು Instagram ನಲ್ಲಿ ಲವ್ ಮಾಡಿ ಮೊನ್ನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿದ್ದರು.ಮದುವೆಯಾದ ಈ ಜೋಡಿ ರಕ್ಷಣೆ ನೀಡುವಂತೆ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡ ವಿಚಾರ ನಿನ್ನೆ ದೊಡ್ಡ ಸುದ್ದಿಯಾಗಿತ್ತು ಆದ್ರೆ ಪ್ರೇಯೆ ಪ್ರೀಯಾಂಕ ಮಾತ್ರ ಮಾಡಿಕೊಂಡಿದ್ದು ಒಂದಾಲ್ಲಾ ಎರಡಲ್ಲಾ ಮೂರು ಮದುವೆ ಎನ್ನುವ ವಿಚಾರ ಇವತ್ತು ಬೆಳಕಿಗೆ ಬಂದಿದೆ.ಪ್ರೀಯಾಂಕಾ ಗೌಡಳ ಮೋಸದ ಪ್ರೀತಿಗೆ ಬೆಳಗಾವಿಯ ರೋಹೀತ್ ಟಾರ್ಗೆಟ್ ಆಗಿರುವದು ದುರ್ದೈವದ ಸಂಗತಿಯಾಗಿದೆ.
ಮೊನ್ನೆ ಮದುವೆಯಾದ ಬೆಂಗಳೂರಿನ ಪ್ರೀಯಾಂಕಾ ಗೌಡ,ಪ್ರೀತಿ ಪ್ರೇಮದ ಹೆಸರಿನಲ್ಲಿ ಬೆಳಗಾವಿ ಹುಡುಗ ರೋಹೀತ್ ನಿಗೆ ಮೋಸ ಮಾಡಿದಳಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಯಾಕಂದ್ರೆ ಇದೇ ಪ್ರೀಯಾಂಕಾ ಗೌಡ ಬೆಂಗಳೂರಿನ ಪೋಲೀಸರಿಗೆ ನಾನು ವೈಫ್ ಆಫ್ ಸುಧಾಕರ್ ಎಂದು ಬರೆದುಕೊಟ್ಟ ಹೇಳಿಕೆ ಪತ್ರ ಈಗ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ್ ಗುಳೆದ ಅವರೆ ತಮ್ಮ ಅಧೀಕೃತ ವಾಟ್ಸಾಪ್ ಗ್ರುಪ್ ಅಲ್ಲಿ ಹಂಚಿಕೊಂಡಿದ್ದಾರೆ.
ಅತ್ತ ಬೆಂಗಳೂರಿನಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡರ ಗಾಳಿ ಬೀಸುತ್ತಿದ್ದರೆ,ಇತ್ತ ಬೆಳಗಾವಿಯಲ್ಲಿ ಪ್ರೀಯಾಂಕಾ ಗೌಡ ಬಿರುಗಾಳಿ ಬೀಸುತ್ತಿದೆ. ನಿನ್ನೆ ಬೆಳಗಾವಿಯ ರೋಹಿತ್ ಜೊತೆ ಮದುವೆಯಾಗಿರುವ ಪ್ರೀಯಾಂಕಾ ಗೌಡ ಮೊದಲು ಸುಧಾಕರ್ ಎಂಬಾತನ ಜೊತೆ ಮದವೆಯಾಗಿದ್ದಳು,ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದ್ದು, ಸ್ವತಃ ಪ್ರೀಯಾಂಕಾ ಗೌಡ ಬರೆದು ಕೊಟ್ಟ ಪತ್ರದಲ್ಲಿ ನಾನು ವೈಫ್ ಆಫ್ ಸುಧಾಕರ್ ಎಂದು ಬರೆದಿದ್ದಾಳೆ. ಪ್ರೀಯಾಂಕಾ ಗೌಡ ಬೆಂಗಳೂರಿನ ಪೋಲೀಸರಿಗೆ ಬರೆದುಕೊಟ್ಟ ಪತ್ರವನ್ನು ಈಗ ವೈರಲ್ ಆಗಿದ್ದು ಸ್ವತಹ ಎರಡನೆ ಗಂಡ ಸುಧಾಕರ ಬೆಳಗಾವಿ ಸುದ್ದಿ ಜೊತೆ ಮಾತನಾಡಿ ತನ್ನ ಜೊತೆ ಇದ್ದ ಪೋಟೋ ಬಿಡುಗಡೆ ಮಾಡಿದ್ದಾನೆ
ಪ್ರೀಯಾಂಕಾ ಗೌಡಳ ಮೊದಲನೇಯ ಪತಿ ಮುನಿರಾಜ ಮತ್ತು ಎರಡನೆ ಪತಿ ಶಿಡ್ಲಘಟ್ಟದ ಸುಧಾಕರ್ ನಡೆ ಈಗ ಬೆಳಗಾವಿ ಕಡೆ ಎಂದು ಗೊತ್ತಾಗಿದ್ದು ಇನ್ಸಟಾ ಗ್ರಾಮಲ್ಲಿ ಹೈ ಹೇಳಿ ಬೆಳಗಾವಿ ಹುಡಗನಿಗೆ ಮೋಸ ಮಾಡಿದವಳು ಬೆಂಗಳೂರಿನ ಪ್ರೀಯಾಂಕಾ ಗೌಡ ಬೆಳಗಾವಿ ಹುಡುಗನಿಗೆ ನಾನು ಕೋಟ್ಯಾಧೀಶೆ, ಬೆಂಗಳೂರು,ಶಿವಮೊಗ್ಗದಲ್ಲಿ ಆಸ್ತಿ ಇದೆ ಎಂದು ಸುಳ್ಳು ಹೇಳಿ ಮದುವೆಯಾದಳಾ ಈ ಪ್ರೀಯಾಂಕಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ.
ಬೆಂಗಳೂರಿನ ಪ್ರೀಯಾಂಕಾ ಗೌಡ ಬೆಳಗಾವಿ ಹುಡುಗನ ಜೊತೆ ಮದುವೆಯಾಗಿದ್ದು ಮೂರನೇಯ ಮದುವೆ ಅನ್ನೋದು ಗೊತ್ತಾದ ಮೇಲೆ ಪ್ರೀಯಾಂಕಾ ಮಾದ್ಯಮಗಳ ಎದುರು ಬಂದಿಲ್ಲ, ಒಂದು ವೇಳೆ ಪ್ರೀಯಾಂಕಾ ಮಾದ್ಯಮಗಳ ಎದುರು ಬಂದು ಸತ್ಯ ಬಿಚ್ಚಿಟ್ಟ ಮೇಲೆ ಅಸಲಿ ಹಕೀಕತ್ತು ಗೊತ್ತಾಗಲಿದೆ.