ಬೆಳಗಾವಿ- ಬೆಳಗಾವಿ ಏರ್ ಫೋರ್ಸ್ ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಏರ್ ಫೋರ್ಸಿನ ಜವಾನನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಂಬ್ರಾ ಏರ್ಫೋರ್ಸ್ ವಿಂಗ್ ಆವರಣದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಜವಾನ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ
ಹರಿಯಾಣಾ ಮೂಲದ 24 ವರ್ಷದ ಅಮೀರ ಹಸಬು ಖಾನ್ ಇಂದು ಬೆಳಿಗ್ಗೆ 9-30 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಂಬ್ರಾ ಏರ್ಫೋರ್ಸ್ ನಲ್ಲಿ ಮುಖ್ಯ ಏರ್ ಮನ್ ಆಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿಭಾಯಿಸುತ್ತಿದ್ದರು ಎಂದು ಗೊತ್ತಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ