ಬೆಳಗಾವಿ- ಪ್ರತಿ ದಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಬಳಿ ತೊಡಿಸುವ 58 ವರ್ಷದ ಬಳಿಗಾರ ಮಹಿಳೆಗೂ ಸೊಂಕು ತಗಲಿದ್ದು ಮಹಿಳೆಯ ಪ್ರಾಥಮಿಕ ಸಂಪರ್ಕ ದಲ್ಲಿ ಬಂದವರನ್ನು ಪತ್ತೆ ಮಾಡಲು ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ.
ಬೆಳಗಾವಿ ನಗರ ಮಾಳಿ ಗಲ್ಲಿಯ 58 ವರ್ಷದ ಬಳಿಗಾರ ಮಹಿಳೆ ಪ್ರತಿ ದಿನ ನಗರದ ಗಲ್ಲಿ ಗಲ್ಲಿ ಗಳಲ್ಲಿ ಸುತ್ತಾಡಿ 200 ಕ್ಕೂ ಹೆಚ್ಚು ಮನೆಗಳ ಮಹಿಳೆಯರಿಗೆ ಬಳೆ ತೊಡೆಸಿದ್ದಾಳೆ ಎಂದು ತಿಳಿದು ಬಂದಿದ್ದು ಈ ಮಹಿಳೆಯ ಟ್ರಾವಲ್ ಹಿಸ್ಟರಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ.
ಸೊಂಕು ತಗಲಿರುವ ಈ ಮಹಿಳೆ ಸುತ್ತಾಡಿದ ಹಿಸ್ಟರಿ ನೋಡಿ ಅಧಿಕಾರಿಗಳು ಯಾರನ್ನು ಕ್ವಾರಂಟೈನ್ ಮಾಡಬೇಕು ಎಲ್ಲಿ,ಮಾಡಬೇಕು,ಬಳಿಗಾರ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವದಾದರೂ ಹೇಗೆ ಎನ್ನುವ ಗೊಂದಲ ಎದುರಾಗಿದೆ.
ಈ ಬಳಿಗಾರ ಮಹಿಳೆಯಿಂದ ಬಳೆ ತೊಡಿಸಿಕೊಂಡ ಮಹಿಳೆಯರಿಗೆ ಈಗ ಆತಂಕ ಶುರುವಾಗಿದೆ.
ಒಟ್ಟಾರೆ ಬೆಳಗಾವಿ ನಗರದಲ್ಲಿ ಕೊರೋನಾ ಮಹಾಮಾರಿ ಸಾಮಾಜಿಕ ವಾಗಿ ಹರಡುತ್ತಿದ್ದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.