ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯ ತಾತ್ಕಾಲಿಕ ರಿಲೀಪ್ ಸಿಕ್ಕಿದೆ. ಮಾನ್ಯ ಉಚ್ಛ ನ್ಯಾಯಾಲಯ ಜಪ್ತಿ ಆದೇಶವನ್ನು ಹಿಂದಕ್ಕೆ ಪಡೆದಿದ್ದು ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿದೆ.
ಬೆಳಗಾವಿ ಮಹಾನಗರದ ಮಹಾತ್ಮಾಪುಲೆ ರಸ್ತೆ ಅಗಲೀಕೆಣ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ಜಮೀನು ಮಾಲೀಕರಿಗೆ 76 ಲಕ್ಷ ರೂ ಪರಿಹಾರ ನೀಡುವ ವಿಚಾರದಲ್ಲಿ ಪಾಲಿಕೆ ಆಸ್ತಿಯನ್ನು ಜಪ್ತಿ ಮಾಡುವಂತೆ ಮಾನ್ಯ ನ್ಯಾಯಾಲಯ ಈ ಹಿಂದೆ ಆದೇಶ ಮಾಡಿತ್ತು.ಈ ನಿಟ್ಟಿನಲ್ಲಿ ನಿನ್ನೆ ಪಾಲಿಕೆ ಕಂದಾಯ ಅಧಿಕಾರಿಗಳ ಕಾರು ಜಪ್ತಿ ಮಾಡುವ ವಿಫಲಯತ್ನವೂ ನಡೆದಿತ್ತು
ಬೆಳಗಾವಿ ಮಹಾನಗರ ಪಾಲಿಕೆಯ ಮನವಿ ಮೇರೆಗೆ ಇಂದು ಜಪ್ತಿ ಆದೇಶವನ್ನು ಹಿಂದಕ್ಕೆ ಪಡೆದಿರುವ ಮಾನ್ಯ ನ್ಯಾಯಾಲಯ ಮುಂದಿನ ವಿಚಾರಣೆಯನ್ನು 27 ಕ್ಕೆ ಮುಂದೂಡಿದ್ದು ಬೆಳಗಾವಿ ಮಹಾನಗರ ಪಾಲಿಕೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ