ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು ಔಷಧಿ ಅಂಗಡಿಯವನಿಗೆ ಮಾತ್ರ ಅರ್ಥ ಆಗುತ್ತೆ ರಾಜ್ಯದ ಇಬ್ಬರು ವೈದ್ಯರು ಈಗ ಕನ್ನಡದಲ್ಲೇ ಔಷಧಿ ಚೀಟಿ ಬರೆಯುವ ಸಂಪ್ರದಾಯ ಶುರು ಮಾಡಿದ್ದಾರೆ.ಇದನ್ನು ರಾಜ್ಯದ ಎಲ್ಲ ವೈದ್ಯರು ಮಾಡಿದ್ರೆ ಅವರೂ ಸಹ ಕನ್ನಡ ಉಳಿಸುವ ಕಾಯಕ ಮಾಡಿದಂತಾಗುತ್ತದೆ.
ಭಾಷೆ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ. ಹೌದು ಒಂದು ಭಾಷೆಯ ಮೇಲಿನ ಅಭಿಮಾನ, ಗೌರವ, ಭಾಷೆಯ ಬಳಕೆ ಆ ಭಾಷೆಯ ಉಳಿಯುವಿಕೆಗೆ ಕಾರಣವಾಗುತ್ತದೆ. ಹಲವರು ತಮ್ಮ ಭಾಷೆಯ ಮೇಲಿನ ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಂದು ವೈದ್ಯರು ಇದೀಗ ತಮ್ಮ ಮಾತೃಭಾಷೆಯಾದ ಕನ್ನಡದ ಮೇಲಿನ ಪ್ರೀತಿಯಿಂದ ನಮ್ಮ ಕನ್ನಡದಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭಿಸಿದ್ದಾರೆ. ಈ ಮೂಲಕ ಕನ್ನಡಾಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕುರಿತ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವೈದ್ಯರ ಕನ್ನಡ ಪ್ರೇಮ ಕನ್ನಡಿಗರ ಮನಗೆದ್ದಿದೆ.
ವೈದ್ಯರು ಬರೆಯುವ ಪ್ರಿಸ್ಕ್ರಿಪ್ಷನ್ ಯಾರಿಗೆ ತಾನೇ ಅರ್ಥವಾಗುತ್ತೆ ಹೇಳಿ, ಇಂಗ್ಲೀಷಿನಲ್ಲಿ ಗೀಚುವ ಈ ಅಕ್ಷರಗಳು ಮೆಡಿಕಲ್ ಶಾಪ್ ಅವರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥವಾಗದು. ಸಾಮಾನ್ಯವಾಗಿ ಎಲ್ಲಾ ಡಾಕ್ಟರ್‌ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಂದಷ್ಟು ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಗಾಗಿ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭಿಸಿದ್ದಾರೆ. ಈ ಕುರಿತ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವೈದ್ಯರ ಕನ್ನಡ ಪ್ರೇಮ ನೆಟ್ಟಿಗರ ಮನ ಗೆದ್ದಿದೆ.
ಚಿಕ್ಕನಾಯಕನಹಳ್ಳಿಯ ಮಹಿಮಾ ದಂತಚಿಕಿತ್ಸಾಲಯದ ವೈದ್ಯರಾದ ಡಾ. ಸಿ.ಜಿ ಮಲ್ಲಿಕಾರ್ಜುನ್ ಮತ್ತು ದೇವರಚಿಕ್ಕನಹಳ್ಳಿಯ ಕೆ.ವಿ ಡೆಂಟಲ್ ಕ್ಲಿನಿಕ್‌ನ ಡಾ. ಹರಿಪ್ರಸಾದ್ ಸಿ.ಎಸ್ ಕನ್ನಡದಲ್ಲಿಯೇ ರೋಗಿಗಳಿಗೆ ಔಷಧ ಚೀಟಿಯನ್ನು ಕೊಡುತ್ತಿದ್ದು, ಈ ಕುರಿತ ಒಂದಷ್ಟು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.