ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು ಬರುವ ಹಿರಿಯ ನಾಗರಿಕರಿಗೆ ಶಾಲಾ ಮಕ್ಕಳಿಗೆ, ಮಹಿಳೆಯರು ಸೇರಿದಂತೆ ಪಾಸ್ ಹೊಂದಿರುವ ಎಲ್ಲ ಸಾರ್ವಜನಿಕರ ಅನಕೂಲಕ್ಕಾಗಿ ಪ್ರವೇಶ ದ್ವಾರದಿಂದ ಸುವರ್ಣಸೌಧದ ಉತ್ತರ ದಿಕ್ಕಿನ ಗೇಟ್ ವರೆಗೆ ಬಸ್ ವ್ಯವಸ್ಥೆ ಮಾಡಿದ್ದಾರೆ.ನಾಲ್ಕು ಬಸ್ ಗಳು ಮತ್ತು ಎರಡು ಇಲೆಕ್ಟ್ರಿಕ್ ವಾಹನಗಳು ನಿತರವಾಗಿ ಸಂಚರಿಸುತ್ತವೆ ಸುವರ್ಣಸೌಧಕ್ಕೆ ಶಾಸಕರಿಂದ ಮಂತ್ರಿಗಳಿಂದ ಪಾಸ್ ಪಡೆದ ಸಾರ್ವಜನಿಕರು ಈ ವಾಹನಗಳ ಸೌಲಭ್ಯ ಪಡೆಯಬಹುದಾಗಿದೆ.
