ಬೆಳಗಾವಿ – ಮಸೀದಿಯಲ್ಲಿ ಮೌಲ್ವಿಯಿಂದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮೂರು ವರ್ಷದ ಬಳಿಕ ಬೆಳಕಿಗೆ ಬಂದಿದ್ದು ಪೋಲೀಸರು ಮೌಲ್ವಿಯನ್ನು ಅರೆಸ್ಟ್ ಮಾಡಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
2023 ಅಕ್ಟೋಬರ್ ತಿಂಗಳಲ್ಲಿ ನಡೆದ ಘಟನೆ ರ ತಡವಾಗಿ ಬೆಳಕಿಗೆ ಬಂದಿದೆ.ಬಾಲಕಿ ಮೇಲೆ ಅತ್ಯಾಚಾರ ಎಸಗುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ರಿಕಾರ್ಡ್ ಆಗಿದೆ. ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ ಬಾಲಕಿ ಪೋಷಕರನ್ನು ಹುಡುಕಿ ಪೋಲೀಸರು ಬಾಲಕಿಯ ಪೋಷಕರಿಂದ ದೂರು ಪಡೆದು ಕೇಸ್ ದಾಖಲಿಸಿದ್ದಾರೆ.
ಮುರಗೋಡ ಪೊಲೀಸರಿಂದ ಪಾಪಿ ವಿರುದ್ಧ ಪ್ರಕರಣ ದಾಖಲಾಗಿದೆ.ಪುನೀತ್ ಕೆರೆಹಳ್ಳಿ ಎಕ್ಸ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ.ಎರಡು ವರ್ಷ ಕಳೆದ್ರೂ ಭಯ ಪಟ್ಟು ಕೇಸ್ ನೀಡದ ಬಾಲಕಿ ಪೋಷಕರು ವಿಡಿಯೋ ಸಿಗ್ತಿದ್ದಂತೆ ಪೊಲೀಸರೇ ಬಾಲಕಿ ತಂದೆಗೆ ಮನವೊಲಿಸಿ ಕೇಸ್ ದಾಖಲಿದ್ದಾರೆ. ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀರ್(22) ಬಂಧಿಸಲಾಗಿದೆ.