Breaking News

ಚಿದಂಬರ ನಗರವನ್ನು ಮಾಡೆಲ್ ಮಾಡ್ತಾರಂತೆ ಅಭಯ ಪಾಟೀಲ್

ಬೆಳಗಾವಿ-ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿರುವ ಶಾಸಕ ಅಭಯ ಪಾಟೀಲ ಅವರು,ತಮ್ಮ ಕ್ಷೇತ್ರದ ಚಿದಂಬರ ನಗರವನ್ನು ಮುಂದಿನ 25 ವರ್ಷಗಳ ಕಾಲ ಈ ನಗರದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದ ಹಾಗೆ ಅಭಿವೃದ್ಧಿ ಪಡಿಸುವದಾಗಿ ವಾಗ್ದಾನ ಮಾಡಿದ್ದಾರೆ.

ಸುಮಾರು ನಾಲ್ಕುವರೆ ಕೋಟಿ ರೂ ವೆಚ್ಚದಲ್ಲಿ ಚಿದಂಬರ್ ನಗರದ ಸರ್ವಾಂಗೀಣ ಅಭಿವೃದ್ಧಿಯ
ಕಾಮಗಾರಿಗೆ ಶಾಸಕ ಅಭಯ್ ಪಾಟೀಲ್ ಇಂದಿಲ್ಲಿ
ಚಾಲನೆ ನೀಡಿದರು

ಫೆವರ್ಸ್ ರಸ್ತೆ ನಿರ್ಮಾಣ ,
ಅಂಡರ್ ಗ್ರೌಂಡ್ ಕೇಬಲ್ ಮತ್ತು ನಿರಂತರ ನೀರು ಪೂರೈಕೆ ಯೋಜನೆ ಪೈಪಲೈನ್ ಅಳವಡಿಕೆ
ಕಾಮಗಾರಿಗೆ ಅವರು ಪೂಜೆ ಸಲ್ಲಿಸಿದರು
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಚಿದಂಬರ ನಗರವನ್ನು
ಮಾದರಿಯಾಗಿ ನಿರ್ಮಾಣ ಮಾಡುವ ಕುರಿತಂತೆ ಈ ಹಿಂದೆ ನೀಡಿದ ಭರವಸೆಯಂತೆ
ಕಾರ್ಯಯೋಜನೆ ಆರಂಭಿಸಿದ್ದಾಗಿ
ಅವರು ಹೇಳಿದರು .
ಫೆವರ್ಸ್ ರಸ್ತೆ ನಿರ್ಮಾಣ ಮಾಡುವುದರಿಂದ ಸುಮಾರು 15 ರಿಂದ 20 ವರ್ಷಗಳ ಕಾಲ ಯಾವುದೇ ತೊಂದರೆ ಬರುವುದಿಲ್ಲ .
ಇದರ ಜೊತೆಗೆ ಗುಣಮಟ್ಟದ ಕಾಮಗಾರಿಗೆ ತಾವು ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಶಾಸಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು .
ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕರಿಗೆ ಕಾಮಗಾರಿಯ
ಅಂದಾಜು ವೆಚ್ಚ ಜೊತೆಗೆ ಸಮಗ್ರ ಮಾಹಿತಿಯುಳ್ಳ
ಪತ್ರವನ್ನು ನೀಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ಈ ರೀತಿ ಮಾಹಿತಿ ನೀಡಿ ಕಾಮಗಾರಿಗೆ ಚಾಲನೆ ನೀಡುವ ದೇಶದಲ್ಲಿಯೇ ಮೊದಲ ಶಾಸಕ ಎಂಬ ಹೆಮ್ಮೆ ನನಗಿದೆ ಎಂದು ಅವರು ತಿಳಿಸಿದರು
ಅರವಿಂದ ಹುನಗುಂದ್
ವಾಣಿ ವಿಲಾಸ ಜೋಶಿ , ಜಿತೇಂದ್ರ ದೇವಣ,
ಆನಂದ್ ಪಾಟೀಲ್
ಶ್ರೀಮತಿ ಅರುಣಾ ನಾಯಕ್ , ಸಂಜೀವ್ ಕುಲಕರ್ಣಿ,
ಮಾಲತೇಶ ಕುಲಕರ್ಣಿ ಮತ್ತಿತರು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *