ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾದ 219 ಸೊಂಕಿತರು ಯಾವ ತಾಲ್ಲೂಕಿನವರು ಗೊತ್ತಾ..?
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಚೆಲ್ಲಾಟದಿಂದ ಬೆಳಗಾವಿಯ ಜನ ತತ್ತರಿಸಿ ಹೋಗಿದ್ದಾರೆ ಇಂದು ಬುಧವಾರ ಈ ಮಹಾಮಾರಿ ವೈರಸ್ ಬೆಳಗಾವಿ ಜಿಲ್ಲೆಗೆ ಮತ್ತೆ ಬಿಗ್ ಶಾಕ್ ನೀಡಿದೆ.
ಇಂದು ಬುಧವಾರ ರಾಜ್ಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯ ಬರೋಬ್ಬರಿ 219 ಜನರಿಗೆ ಸೊಂಕು ದೃಡವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಪ್ರತಿದಿನ ಶೇಕಡಾವಾರು ಹೆಚ್ಚುತ್ತಿದೆ,ಬೆಳಗಾವಿ ನಗರದ ಚಿಕ್ಕ ಪುಟ್ಟ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಕೆಮ್ಮು,ಜ್ವರ,ನೆಗಡಿ,ಬಿಪಿ ಲೋ..ಬಿಪಿ ಹೈ ಆದ್ರೆ ,ಡಾಕ್ಟರ್ ಗಳು ಸಿಗುತ್ತಿಲ್ಲ,ಔಷಧಿ ಅಂಗಡಿಗಳಲ್ಲಿ ಮಾತ್ರೆಗಳನ್ನು ಕೊಡುತ್ತಿಲ್ಲ,ಸಣ್ಣ ಪುಟ್ಟ ಕಾಯಿಲೆ ಬಂದರೂ ಉಪಚಾರ ಸಿಗದ ಕಾರಣ ಬೆಳಗಾವಿ ನಗರದಲ್ಲೇ ಹಲವಾರು ಜನ ಜೀವ ಬಿಟ್ಟಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯಲ್ಲಿ 219 ಸೊಂಕಿತರು ಪತ್ತೆಯಾಗಿದ್ದು,219 ಪೈಕಿ ಅಥಣಿ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು 92 ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ನಗರ ಮತ್ತು ತಾಲ್ಲೂಕಿನಲ್ಲಿ 72 ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 219 ಸೊಂಕಿತರು ಯಾವ ಯಾವ ತಾಲ್ಲೂಕಿನವರು ವಿವರ ಇಲ್ಲಿದೆ ನೋಡಿ
ಅಥಣಿ-92
ಬೆಳಗಾವಿ -72
ರಾಯಬಾಗ-14
ಚಿಕ್ಕೋಡಿ-5
ಖಾನಾಪೂರ-5
ಗೋಕಾಕ-7
ವಿಜಯಪೂರ-1
ಬೈಲಹೊಂಗಲ-3
ಹುಕ್ಕೇರಿ-9
ಸವದತ್ತಿ-10
ಧಾರವಾಡ- 1
ಒಟ್ಟು- 219
Athani–92
Belgaum–72
Raibag–14
Chikkodi–5
Khanapur–5
Gokak–7
Bijapur–1
Bailhongal–3
Dharwad–1
Hukkeri–9
Savadatti–10
Total- 219