ಬೆಳಗಾವಿ- ಗುಂಡಿಯಲ್ಲಿ ಹೆಣ ಎಸೆದಿದ್ದಾಯ್ತು ಇದೀಗ ಬೆಳಗಾವಿಯಲ್ಲಿ ಚಿತೆ ಮೇಲೆ ಹೆಣ ಎಸೆದ ಅಮಾನವೀಯ ಘಟನೆಗೆ ಬೆಳಗಾವಿಯ ಸ್ಮಶಾನವೊಂದು ಸಾಕ್ಷಿಯಾಗಿದೆ.
ಬೆಳಗಾವಿ ನಗರದಲ್ಲಿ ಕೊರೊನಾ ಸೋಂಕಿತರ ಸಾವು ದಿನದಿಂದ ದಿನಕ್ಕೆ ಹೆಚ್ವುತ್ತಲೇ ಇದೆ.ಬೆಳಗಾವಿಯಲ್ಲಿ ಬೇಕಾಬಿಟ್ಟಿ ಅಂತ್ಯಕ್ರಿಯೆ ನಡೆಯತ್ತಿದೆ,ಎನ್ನುವದಕ್ಕೆ ಮೋಬೈಲ್ ವಿಡಿಯೋವೊಂದು ಅದಕ್ಕೆ ಸಾಕ್ಷ್ಯ ಒದಗಿಸಿದೆ.
ಬೆಳಗಾವಿ ನಗರದ ಮಧ್ಯಭಾಗದ ಸ್ಮಶಾನದಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಯುತ್ತಿದೆ. ಮಹಾನಗರ ಪಾಲಿಕೆಯ ಸದಾಶಿವ ನಗರ ಸ್ಮಶಾನದಲ್ಲಿ ಸೊಂಕಿತರ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ಅಮಾನವೀಯ ಅಂತ್ಯಕ್ರಿಯೆ ಮಾಡುತ್ತಿದ್ದಾರೆ .ಶವಗಳನ್ನ ಚಿತೆಯ ಮೇಲೆ ಎಸೆದು ಅಂತ್ಯಕ್ರಿಯೆ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಮಶಾನದ ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಹೊರ ಭಾಗದಲ್ಲೇ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಕಟ್ಟಿಗೆಯ ಚಿತೆ ಮೇಲೆ ಶವಗಳನ್ನು ಎಸೆದು ಅಂತ್ಯಕ್ರಿಯೆ ಮಾಡಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ
.ಶವ ಸಂಸ್ಕಾರ ಮಾಡುವ ಜಾಗದಲ್ಲಿ ನಾಯಿಗಳ ಓಡಾಡುತ್ತಿವೆ.  ರೆಡಿಯಾದ ಚಿತೆಯ ಮೇಲೆ ಶವಗಳನ್ಮು ಎಸೆಯುವದು ಸದಾಶಿವ ನಗರದ ಸ್ಮಶಾನದಲ್ಲಿ ಸಾಮಾನ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ