ಬೆಳಗಾವಿ- ಹನಿ ಟ್ರ್ಯಾಪ್ ಮೂಲಕ ಜಮಖಂಡಿಯ ವ್ಯೆಕ್ತಿಯೊಬ್ಬನಿಗೆ,ನಿನ್ನ ಅಡಿಯೋ ವಿಡಿಯೋ ತೋರಿಸುತ್ತೇವೆ ಎಂದು ಬೆದರಿಸಿ ಹತ್ತು ಲಕ್ಷ ರೂಗಳನ್ನು ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಐವರು ಪಂಚರಂಗಿಗಳು ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಜಮಖಂಡಿಯ ವ್ಯೆಕ್ತಿಯೊಬ್ಬನ ಜೊತೆ ಸ್ನೇಹ ಬೆಳಿಸಿ ಈತನ ಅಡಿಯೋ ವಿಡಿಯೋ ರಿಕಾರ್ಡ್ ಮಾಡಿ,ಹತ್ತು ಲಕ್ಷ ರೂ ಕೊಡದಿದ್ದರೆ ,ಅಡಿಯೋ ವಿಡಿಯೋ ಎರಡನ್ನೂ ಯೂಟ್ಯುಬ್ ಚಾನೆಲ್ಲನಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ ಗೌರಿ,ಮಂಜುಳಾ,ಸಂಗೀತಾ ಜೊತೆ ಸದಾಶಿವ ಮತ್ತು ರಘುನಾಥ ಎಂಬ ಪಂಚರಂಗಿ ಗಳು ಪೋಲೀಸರ ಬಲೆಗೆ ಬಿದ್ದಿದ್ದಾರೆ
ಈ ಪಂಚರಂಗಿಗಳು ಬುಧವಾರ,ಜಮಖಂಡಿಯ ವ್ಯೆಕ್ತಿಯನ್ನು ನೆಹರು ನಗರದ ಹೊಟೇಲ್ ಗೆ ಕರೆಯಿಸಿ,ಹತ್ತು ಲಕ್ಷ ರೂ ಕೊಡುವಂತೆ ಬೆದರಿಸಿ ಕೊನೆಗೆ ಐದು ಲಕ್ಷ ರೂ ಗೆ ವ್ಯವಹಾರ ಕುದುರಿಸಿದ್ದರು.
ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ಅವರ ನೇತ್ರತ್ವದಲ್ಲಿ ಮಾಳಮಾರುತಿ ಸಿಪಿಐ ಗಡ್ಡೇಕರ ಅವರು ದಾಳಿ ಮಾಡಿ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಸವದತ್ತಿಯ ಗೌರಿ ಲಮಾಣಿ,ಮಂಜುಳಾ ಜತ್ತೆಣ್ಣವರ,ಸಂಗೀತಾ ಹಣಕಿಕೊಪ್ಪ,ರಾಮದುರ್ಗದ ಸದಾಶಿವ ಚಿಪ್ಪಲಕಟ್ಟಿ,ಅಥಣಿಯ ರಘುನಾಥ ಧುಮಾಳೆ ಅವರನ್ನು ಬಂಧಿಸಿದ್ದಾರೆ.
ಅವರ ಬಳಿ ಇದ್ದ ಪ್ರೈಮ್ ನ್ಯುಸ್ ಯುಟ್ಯುಬ್ ಚೆನಲ್ ಎಂದು ನಮೂದಿಸಿದ ಐಡಿ ಕಾರ್ಡ್ ಮತ್ತು ಮೋಬೈಲ್ ಫೋನ್ ಈಗ ಪೋಲೀಸರ ವಶದಲ್ಲಿವೆ. ಮಾಳಮಾರುತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಹನಿಟ್ರ್ಯಾಪ್ ಗೆ ತುತ್ತಾಗಿದ್ದ ಜಮಖಂಡಿಯ ವ್ಯೆಕ್ತಿ ಈಗ ರಿಲ್ಯಾಕ್ಸ್ ಆಗಿದ್ದಾನೆ.