ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಈಗ ಸರ್ವವ್ಯಾಪಿಯಾಗಿದೆ.ಒಂದು ಏರಿಯಾ ಸೀಲ್ ಡೌನ್ ಮಾಡಿದ್ದನ್ನು ನೋಡಿ ಬೇಸರ ಪಡುವವರ ಸಂಖ್ಯೆ ಜಾಸ್ತಿ
ಭಾಗ್ಯನಗರದ ಎಂಟನೇಯ ಕ್ರಾಸಿನಲ್ಲಿ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಏರಿಯಾ ಸೀಲ್ ಡೌನ್ ಮಾಡಲಾಗಿದೆ.ಇಂದು ಬೆಳಿಗ್ಗೆ ಇಲ್ಲಿಯ ಬ್ಯಾರಿಕೇಡ್ ಮೇಲೆ ನೇತಾಡುತ್ತಿರುವ ಫಲಕ ಮಾನವೀಯತೆಯ ಸಂದೇಶ ನೀಡುತ್ತಿದೆ.
ಯಾರೋ ಪುಣ್ಯಾತ್ಮನೊಬ್ಬ ಬ್ಯಾರಿಕೇಡ್ ಮೇಲೆ ಗೆಟ್ ವೆಲ್ ಸೂನ್ ಎಂಬ ಬೋರ್ಡ್ ಹಾಕಿ ಸೊಂಕಿತರು ಬೇಗ ಗುಣಮುಖರಾಗಲಿ ಕಗ್ಗಂಟಾದ ದಾರಿ ಸುಗಮವಾಗಲಿ ಎಂದು ಪ್ರಾರ್ಥಿಸಿ ಮಾನವ ಕುಲಕ್ಕೆ ದೊಡ್ಡ ಸಂದೇಶ ನೀಡಿದ್ದಾನೆ.
ಕೊರೋನಾ ಈಗ ಯಾವ ಊರು ಕೇರಿ,ಯನ್ನು ಬಿಟ್ಟಿಲ್ಲ,ಬಹುತೇಕ ಎಲ್ಲಡೆ ಹರಡಿದೆ.ಎಲ್ಲಿ ನೋಡಿದಲ್ಲಿ ಸೀಲ್ ಡೌನ್ ಬ್ಯಾರಿಕೇಡ್ ಗಳು ಕಾಣಿಸುತ್ತಿವೆ.ಈ ಮಹಾಮಾರಿ ಸರ್ವವ್ಯಾಪಿಯಾಗಿರುವ ಸಂಧರ್ಭದಲ್ಲಿ ಮಾನೀಯತೆಗೆ ಸಾಕ್ಷಿಯಾಗುವ ಸಂದೇಶಗಳು ಎಲ್ಲೆಡೆ ಹರಿದಾಡಲಿ,ಎಲ್ಲರೂ ಈ ಮಹಾಮಾರಿಯ ಸಂಕಷ್ಟದಿಂದ ಪಾರಾಗಲಿ ಎನ್ನುವದಷ್ಟೇ ನಮ್ಮೆಲ್ಲರ ಆಶಯವಾಗಿದೆ.
ಸಾರ್ವಜನಿಕರು ಈ ರೋಗಕ್ಕೆ ಹೆದರುವ ಅಗತ್ಯವಿಲ್ಲ ಆದ್ರೆ ಮುಂಜಾಗೃತೆ ವಹಿಸುವದು ತುಂಬಾ ಅಗತ್ಯವಾಗಿದೆ.ಕಡ್ಡಾಯವಾಗಿ ಸೋಶಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿ,ಮಾಸ್ಕ ಹಾಕಿಕೊಳ್ಳಿ,ಪದೇ ಪದೇ ಸೈನಿಟೈಸರ್ ಉಪಯೋಗಿಸಿ,ಎಲ್ಲರೂ ಬಿಸಿ ನೀರು ಕುಡಿಯಿರಿ,ಅನವಶ್ಯಕವಾಗಿ ಹೊರಗಡೆ ಸುತ್ತಾಡ ಬೇಡಿ ಮನೆಯಲ್ಲೇ ಇದ್ದು ಈ ಮಹಾಮಾರಿಯನ್ನು ತೊಲಗಿಸುವ ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸಿ.