ಬೆಳಗಾವಿ- ವಾಹನಗಳ ಪಾರ್ಕಿಂಗ್ ಗೆ ಸ್ಥಳವಿಲ್ಲ,ಆದರೂ ಆರ್ ಟಿ ಓ ಕಚೇರಿ ರಸ್ತೆಯ ಎರಡೂ ಬದಿಗೆ ವಾಹನಗಳ ಪಾರ್ಕಿಂಗ್ ಮಾಡಲು ಬೆಳಗಾವಿಯ ಕಾಂಟೋನ್ಮೆಂಟ್ ಬೋರ್ಡ್ ಅನುಮತಿ ನೀಡಿದೆ.
ಈ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಗುತ್ತಿಗೆದಾರನನ್ನು ನೇಮಿಸಿ.ಯಾವ ವಾಹನಕ್ಕೆ ಎಷ್ಟು ಶುಲ್ಕ ಎನ್ನುವದರ ಬಗ್ಗೆ ಆರ್ ಟಿ ಓ ಕಚೇರಿಯ ಬಳಿ ಕಾಂಟೋನ್ಮೆಂಟ್ ಬೋರ್ಡ್ ದೊಡ್ಡ ಫಲಕ ಹಾಕಿದೆ.
ರಸ್ತೆಯ ಇಕ್ಕೆಲುಗಳಲ್ಲಿ ವಾಹನಗಳು ಪಾರ್ಕಿಂಗ್ ಮಾಡಿದ ದರೆ ಆರ್ ಟಿ ಓ ರಸ್ತೆ ಸಂಚಾರದ ಗತಿ ಏನಾಗಬಹುದು ಎನ್ನುವ ಆತಂಕ ಎದುರಾಗಿದೆ.
ರಸ್ತೆಯ ಇಕ್ಕೆಲುಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಅನುಮತಿ ನೀಡಿ ಶುಲ್ಕ ವಸೂಲಿ ಮಾಡಲು ಮುಂದಾಗಿರುವ ಕಾಂಟೋನ್ಮೆಂಟ್ ಬೋರ್ಡಿನ ನಿರ್ಧಾರದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯೆಕ್ತವಾಗಿದೆ.