ಬೆಳಗಾವಿ:
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಅಮಿತ್ ಪಾವಲೆ (35) ಎಂಬಾತನ ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ (47) ಎಂಬಾತನಿಂದ ಕೃತ್ಯ ನಡೆದಿದೆ.
ಗಾಯಗೊಂಡಿರುವ ಅಮಿತ್ ಎಂಬಾತ ಕಾತ್ಸು ಸಹೋದರಿ ಪುತ್ರನಾಗಿದ್ದಾನೆ.
ಎರಡು ಕುಟುಂಬ ನಡುವಿನ ಜಮೀನು ವಿವಾದ ಕೋರ್ಟ್ ಅಲ್ಲಿಇತ್ತೀಚಿಗೆ ಇತ್ಯರ್ಥಗೊಂಡಿತ್ತು. ಅಮಿತ್ ಪಾವಲೆ ಪರವಾಗಿ ಜಮೀನು ವಿವಾದ ಕುರಿತು ತೀರ್ಪು ಬಂದಿತ್ತು.
ಇದರಿಂದ ಕುಪಿತಗೊಂಡ ಕಾತ್ಸು ತರಳೆ ಸಹೋದರಿ ಪುತ್ರ ಅಮಿತ್ ಮೇಲೆ ಫೈರಿಂಗ್ ಮಾಡಿ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಅಮಿತ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ