ಬೆಳಗಾವಿ- ಮಹಾರಾಷ್ಟ್ರದ ಕೋಯ್ನಾ,ವಾರಣಾ ಜಲಾಶಯಗಳ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ಕೋಯ್ನಾ ಜಲಾಶಯ ಭರ್ತಿಯಾಗುವ ಹೊಸ್ತಿಲಲ್ಲಿದ್ದು ಇಂದು ಮದ್ಯಾಹ್ನ ಕೋಯ್ನಾ ಜಲಾಶಯದಿಂದ ಐವತ್ತು ಸಾವಿರ ಕ್ತುಸೆಕ್ಸ ನೀರು ಕೃಷ್ಣಾ ನದಿಗೆ ಹರಿದು ಬರಲಿದೆ.
ಮಳೆಯಿಂದಾಗಿ ರಾಜಾಪೂರ ಬ್ಯಾರೇಜ್ ನಲ್ಲಿ ಒಳ ಹರಿವು ಈಗಾಗಲೇ ಒಂದುವರೆ ಲಕ್ಷ ಕ್ಯುಸೆಕ್ಸ್ ತಲುಪಿದಿ ಇಂದು ಮದ್ಯಾಹ್ನ ಕೋಯ್ನಾ ಜಲಾಶಯದಿಂದ 50 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆಯಾಗಲಿದ್ದು ಇಂದು ರಾತ್ರಿ ಅಥವಾ ನಾಳೆ ಕೃಷ್ಣಾ ನದಿಯ ಒಳ ಹರಿವು ಎರಡು ಲಕ್ಷ ದಾಟಲಿದೆ.
ಕೃಷ್ಣಾ ನದಿಯಲ್ಲಿ ಒಳ ಹರಿವು ಎರಡು ಲಕ್ಷ ಮೀರಿದರೆ ಕೃಷ್ಣಾ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುವ ಸಾದ್ಯತೆ ಹೆಚ್ವು. ಮಹಾರಾಷ್ಟ್ರದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದು ಅಲ್ಲಿಯ ಎಲ್ಲ ಜಲಾಶಯಗಳು ಭರ್ತಿಯಾಗುತ್ತಿವೆ.ಪರಿಸ್ಥಿತಿಗೆ ತಕ್ಕಂತೆ ಅಳತೆ ಮೀರಿ ನೀರೀಕ್ಷೆಗೂ ಮೀರಿ ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಹರಿದು ಬರುವ ಪರಿಸ್ಥಿತಿ ಮಹಾರಾಷ್ಟ್ರದಲ್ಲಿದ್ದು,ಕರ್ನಾಟಕದ ನೀರಾವರಿ ಇಲಾಖೆಯ ಅಧಿಕಾರಿಗಳು ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.
ಗಡಿಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜಾಪೂರ ಬ್ಯಾರೇಜ್ ನ ಒಳ ಹರಿವು ಒಂದುವರೆ ಲಕ್ಷ ಕ್ಯುಸೆಕ್ಸ್ ತಲುಪಿದ್ದು ಜಲಾಶಯಗಳಿಂದ ಬಿಡುಗಡೆಯಾದ ನೀರು,ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹರಿದು ಬರುವ ನೀರು ಎರಡು ಸೇರಿ ಕೃಷ್ಣಾ ತೀರದಲ್ಲಿ ಆತಂಕ ಸೃಷ್ಠಿಸುವ ಪರಿಸ್ಥಿತಿ ಎದುರಾಗಿರುವದು ಸತ್ಯ.
ಈ ಪರಿಸ್ಥಿತಿ ಯನ್ನು ಬೆಳಗಾವಿ ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವದನ್ನು ಕಾಯ್ದು ನೋಡಬೇಕಾಗಿದೆ.