ಕೋವಿಡ್-19 ಇಡೀ ಮಾನವ ಕುಲದ ಮನುಷ್ಯತ್ವಕ್ಕೆ ಸವಾಲು ಎಸೆದಿದೆ. ಕೋವಿಡ್‍ನಿಂದಾಗಿ ಉಂಟಾಗುತ್ತಿರುವ ಸಾವುಗಳನ್ನು ನಾಗರಿಕ ಸಮಾಜದ ಮಾನವೀಯತೆಯನ್ನು ಪರೀಕ್ಷೆಗೆ ಒಳಪಡೆಸಿವೆ. ಮಾನವೀಯ ಸಾಕ್ಷಿಗಳು ಎದುರಿಗಿರುವಂತೆ ಕನಿಷ್ಟಮಟ್ಟದ ಮಾವೀಯತೆ ತೋರದ ಹಲವಾರು ಸಾಕ್ಷಿಗಳು ನಿತ್ಯ ಎದುರಾಗುತ್ತಿವೆ.
ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿಯಲ್ಲಿ 70 ವರ್ಷ ವಯಸ್ಸಿನ ಹಿರಿಯ ಜೀವಯೊಂದು ಕೋವಿಡ್ ಚಿಕಿತ್ಸೆ ಫಲಿಸದೆ ಶನಿವಾರ ಸಂಜೆ ಸಾವಿಗೀಡಾಗಿದ್ದಾರೆ. ಕೊರೊನಾ ಭಯದಿಂದಾಗಿ ಶವ ಸಂಸ್ಕಾರಕ್ಕೆ ಊರಿನ ಯಾರೂ ಸಮೀಪ ಸುಳಿಯಲಿಲ್ಲ.
ವಿಷಯ ಪಟ್ಟಣ ಪಂಚಾಯಿತಿಗೆ ತಿಳಿಸಿದಾಗ ಪಂಚಾಯಿತಿಯವರು ಶವ ಸಂಸ್ಕಾರಕ್ಕೆ ತೆಗೆದುಕೊಂಡ ಕ್ರಮ ಎಲ್ಲರ ಗಮನ ಸೆಳೆದಿದೆ. ಶವ ಸಾಗಿಸಲಿಕ್ಕೆ ವಾಹನ ಇಲ್ಲದೇ ಇರುವದರಿಂದ ಮೃತರ ಕುಟುಂಬಸ್ಥರು ಶವವನ್ನು ಸೈಕಲ್ ಮೇಲೆ ಹೊತ್ತು ಸಾಗಿಸುವುದಕ್ಕೆ ಮುಂದಾಗಿದ್ದಾರೆ. ಶವ ಸಂಸ್ಕಾರಕ್ಕೆ ಮನುಷ್ಯ ಸಮಾಜದಲ್ಲಿ ಒಂದು ಗೌರವ ಪದ್ದತಿ ಇದೆ.. ಇದನ್ನು ಮರೆತ ಪಟ್ಟಣ ಪಂಚಾಯಿತಿ ಹಿರಿಯ ಜೀವಯ ಶವವನ್ನು ಸೈಕಲ್ ಮೇಲೆ ಸಾಗಿಸುವ ಅನಿವಾರ್ಯತೆ ತಂದಿದೆ ಇದು ಸಾರ್ವಜನಿಕರಲ್ಲಿ ಬೆರಗು ಮೂಡಿಸಿದೆ. ಅನೇಕರು ಈ ಸೈಕಲ್ ಮೇಲೆ ಶವ ಸಾಗಿಸುವ ಮೆರವಣಿಗೆಯನ್ನು ತಮ್ಮ ಮೊಬೈಲ್‍ಗಳಲ್ಲಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಇದರಿಂದ ಎಚ್ಚೆತ್ತಕೊಂಡು ಮನುಷ್ಯತ್ವ ಮರುಕಳಿಸಿದಾಗ ಪಟ್ಟಣ ಪಂಚಾಯತಿಯ ಸದಸ್ಯ ಪಟ್ಟಣಶೆಟ್ಟಿ ವಾಹನ ತರಿಸಿ ಶವ ಸಾಗಿಸಿ ಸಂಸ್ಕಾರ ಪೂರ್ಣಗೊಳಿಸಿದ್ದಾರೆ.
ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಗಳ ಶವ ಸಂಸ್ಕಾರ ಕನಿಷ್ಠ ಮಟ್ಟದ ಮಾನವೀಯ ನೆಲೆಯಲ್ಲಿ ಕಾಣುವಂತೆ ಸೂಚಿಸಲಾಗಿದ್ದರೂ ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾತಿಯು ಈ ವಿಷಯದಲ್ಲಿ ತನ್ನ ತನ್ನ ಜವಾಬ್ದಾರಿ ಮರೆತಿದೆ
ಸೈಕಲ್ ಮೇಲೆ ಶವ ಸಾಗಿಸುವುದನ್ನು ಕಂಡು ಮೊಬೈಲ್‍ದಲ್ಲಿ ಸೆರೆ ಹಿಡಿಯುವುದಕ್ಕೆ ಮುಂದಾಗಿರುವುದು ಒಟ್ಟು ನಾಗರಿಕ ಸಮಾಜದ ಮನುಷ್ಯತ್ವಕ್ಕೆ ಸಾಕ್ಷಿ ಒದಗಿಸಿದೆ.