ಬೆಳಗಾವಿ-ಮಲಪ್ರಭಾ ನದಿಯಿಂದ ಗೆದ್ದಿಕೆರೆ ತುಂಬಿಸುವ ಯೋಜನೆ,ನಿನ್ನೆ ಮೊನ್ನೆ ಹುಟ್ಟಿಕೊಂಡ ಯೋಜನೆ ಅಲ್ಲ.ಈ ಯೋಜನೆ ಕಿತ್ತೂರು ಕ್ಷೇತ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ನಾಲ್ಕು ದಶಕಗಳ ಹಿಂದೆಯೇ ರೂಪಿಸಿದ ಯೋಜನೆ ಇದಾಗಿದೆ
ಎಂ.ಕೆ ಹುಬ್ಬಳ್ಳಿ ಗ್ರಾಮದ ಗೆದ್ದಿಕೆರೆ ಮಲಪ್ರಭಾ ನದಿಯಿಂದ ಕೇವಲ 2.5 ಅಂದ್ರೆ ಎರಡುವರೆ ಕಿ.ಮೀ ಅಂತರದಲ್ಲಿ ಇದೆ. ನದಿಯಿಂದ ಇಷ್ಟೊಂದು ಸಮೀಪವಾಗಿರುವ ಕೆರೆಯನ್ನು ತುಂಬಿಸುವ ಕಾಮಗಾರಿ ಆರಂಭಿಸಲು ನಾಲ್ಕು ದಶಕಗಳೇ ಬೇಕಾದವು.
ಇಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಮತ್ತು ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡ್ರ ಇವರು ಇಂದು ಗೆದ್ದಿಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಕೆರೆ ತುಂಬಿಸುವ ಯೋಜನೆಯಿಂದ ಗೆದ್ದಿಕೆರೆಯನ್ನು ತುಂಬಿಸಲು ಕಿತ್ತೂರವನ್ನಾಳಿದ ನಾಯಕರಿಗೆ ಇದುವರೆಗೆ ಸಾದ್ಯವಾಗಿರಲಿಲ್ಲ,ಭಗವಂತನ ಕೃಪೆಯಿಂದ ಈಬಾರಿ ಸಿಕ್ಕಾಪಟ್ಟೆ ಮಳೆ ಸುರಿದ ಪರಿಣಾಮ ಕಿತ್ತೂರು ಕ್ಷೇತ್ರದ ದೊಡ್ಡ ಕೆರೆಯಾದ ಗೆದ್ದಿಕೆರೆ ತುಂಬಿ ತುಳಕಿತ್ತು.
ಜೆರೆ ತುಂಬಿ ಕೆರೆಯ ದಡದಲ್ಲಿರುವ ಹೊಲಗದ್ದೆಗಳಿಗೆ ಕೆರೆಯ ನೀರು ನುಗ್ಗಬಾರದು ಎಂಬ ಮುಂಜಾಗೃತೆಯಿಂದ ಇಂದು ಗೆದ್ದಿಕೆರೆಯ ಕಟ್ಟೆ ಒಡೆದು ನೀರು ಹರಿದು ಬಿಡಲಾಯಿತು.
ನಾಲ್ಕು ದಶಕಗಳ ನಂತರ ಇವತ್ತು ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿದ ದಿನವೇ ಕೆರೆಯ ಕಟ್ಟೆ ಒಡೆಯುವ ಪರಿಸ್ಥಿತಿ ರದುರಾಗಿದ್ದು ಕಾಕತಾಳಿ.
ಎಂ.ಕೆ ಹುಬ್ಬಳ್ಳಿ ಗ್ರಾಮದ ಗೆದ್ದಿಕೆರೆ ತುಂಬಿಸುವ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಮಾಜಿ ಶಾಸಕ ಡಿ.ಬಿ ಇನಾಮದಾರ ಅವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು ಇವತ್ತು ಎರಡನೇಯ ಬಾರಿಗೆ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡ್ರು ಕಾಮಗಾರಿಗೆ ಚಾಲನೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.