Breaking News

ಪೋಲೀಸ್ ಅಧಿಕಾರಿಗಳ ಸಂಧಾನ ವಿಫಲ,ಪೀರನವಾಡಿ ಸರ್ಕಲ್ ನಲ್ಲಿಯೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅಭಿಮಾನಿಗಳ ಪಟ್ಟು…!

ಬೆಳಗಾವಿ- ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡೇ ಇರುವ ಪೀರನವಾಡಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ವಿವಾದ ಈಗ ರಾಜ್ಯಮಟ್ಟದ ಗಮನ ಸೆಳೆದಿದ್ದು,ನಿನ್ನೆ ಪೋಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ವಿಫಲವಾಗಿದೆ.

ಬೆಳಗಾವಿ ನಗರದ ಕೆಲವು ಪೋಲೀಸ್ ಅಧಿಕಾರಿಗಳು ನಿನ್ನೆ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ರಾಯಣ್ಣನ ಅಭಿಮಾನಿಗಳ ಸಭೆ ಕರೆದು ನಿಮಗೆ ಪೀರನವಾಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಐದು ಗುಂಟೆ ಜಾಗ ಕೊಡುತ್ತೇವೆ,ಈ ಜಾಗದಲ್ಲಿ ತಾವು ಮೂರ್ತಿ ಪ್ರತಿಷ್ಠಾಪನೆ ಮಾಡಿ,ಸುತ್ತಲು ಬೇಕಾದ್ರೆ ಗಾರ್ಡನ್ ಮಾಡಿ ಎಂದು ಪೋಲೀಸ್ ಅಧಿಕಾರಿಗಳು ರಾಯಣ್ಣನ ಅಭಿಮಾನಿಗಳಿಗೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಇದಕ್ಕೆ ಒಪ್ಪದ ರಾಯಣ್ಣನ ಅಭಿಮಾನಿಗಳು,ಹಲವಾರು ವರ್ಷಗಳಿಂದ ನಾವು ಪೀರನವಾಡಿ ಸರ್ಕಲ್ ನಲ್ಲಿಯೇ ಮೂರ್ತಿ ಪ್ರತಿಷ್ಠಾಪನೆಗೆ ಹೋರಾಟ ಮಾಡುತ್ತ ಬಂದಿದ್ದೇವೆ ಅಲ್ಲಿಯೇ ನಾವು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ,ನಮಗೆ ಅನುಮತಿ ಕೊಡಿ ಎಂದು ರಾಯಣ್ಣನ ಅಭಿಮಾನಿಗಳು ಪಟ್ಟು ಹಿಡಿದ ಹಿನ್ನಲೆಯಲ್ಲಿ ಸಂಧಾನ ವಿಫಲವಾಗಿದೆ ಎಂದು ತಿಳಿದು ಬಂದಿದೆ.

ಪೀರನವಾಡಿಯ ಮೂರ್ತಿ ವಿವಾದದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಪೋಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಟ್ವೀಟ್ ಮಾಡಿರುವ ಹಿನ್ನಲೆಯಲ್ಲಿ ಪೋಲೀಸ್ ಅಧಿಕಾರಿಗಳು ರಾಯಣ್ಣನ ಅಭಿಮಾನಿಗಳ ಜೊತೆ ನಡೆಸಿದ ಪ್ರಥಮ ಸುತ್ತಿನ ಮಾತುಕತೆ ನಡೆಸಿದ್ದಾರೆ.ಆದ್ರೆ ರಾಯಣ್ಣನ ಅಭಿಮಾನಿಗಳು ನಾವು ಸರ್ಕಲ್ ನಲ್ಲಿಯೇ ಮೂರ್ತಿ ಪ್ರತಿಷ್ಠಾಪನೆ ಮಾಡುವದಾಗಿ ಪಟ್ಟು ಹಿಡಿದಿದ್ದಾರೆ.

ರಾಯಣ್ಣನ ಮೂರ್ತಿ ವಿವಾದದ ಕುರಿತು ಬೆಂಗಳೂರಿನಲ್ಲಿಯೂ ವಿವಿಧ ಸಂಘಟನೆಗಳು ಹೋರಾಟ ಆರಂಭಿಸಿವೆ.ಕೆಲವು ಸಂಘಟನೆಗಳು ಬೆಂಗಳೂರಿನಂದ ಬೆಳಗಾವಿಗೆ ಬಂದು ಹೋರಾಟ ಮಾಡುವ ತಯಾರಿ ನಡೆಸಿದ್ದು, ಈ ವಿವಾದ ಈಗ ರಾಜ್ಯದ ಗಮನ ಸೆಳೆದಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *