Breaking News

ಬೆಳಗಾವಿ ಡಿಸಿ ಕಚೇರಿ ಎದುರು ಲೈಟ್ ಆ್ಯಂಡ್ ಸೌಂಡ್….,!

ಬೆಳಗಾವಿ-ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಪರಿಷ್ಕೃತ ಆದೇಶ ಹೊರಡಿಸುತ್ತಿದ್ದಂತೆಯೇ ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್ ಅಸೋಸಿಯೇಷನ್ ನವರು ನಮಗೂ ಅನುಮತಿ ಕೊಡಿ ಎಂದು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ .

ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ಕೊಟ್ಟಿದೆ,ನಮಗೂ ಗಣೇಶ ಉತ್ಸವದಲ್ಲಿ ಲೈಟ್ ಆ್ಯಂಡ ಸೌಂಡ್ ಸಿಸ್ಟಮ್ ಅಳವಡಿಸಲು ಅನುಮತಿ ಕೊಡಬೇಕು ಎಂದು ಬೆಳಗಾವಿ ನಗರದ ಸೌಂಡ್ ಆ್ಯಂಡ್ ಸಿಸ್ಟಮ್ ಮಾಲೀಕರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸಾಲ ಮಾಡಿ ಸೌಂಡ್ ಸಿಸ್ಟಮ್ ಖರೀಧಿ ಮಾಡಿದ್ದೇವೆ,ಕಳೆದ ನಾಲ್ಕು ತಿಂಗಳಿನಿಂದ ನಮ್ಮ ಬದುಕು ಲಾಕ್ ಡೌನ್ ಆಗಿದೆ.ಲೋನ್ ಕಂತು ಕೂಡಾ ಪಾವತಿ ಮಾಡಲು ಸಾದ್ಯವಾಗಿಲ್ಲ,ಲೈಟ್ ಆ್ಯಂಡ್ ಸೌಂಡ್ ಉದ್ಯಮಕ್ಕೆ ನೂರಾರು ಕುಟುಂಬಗಳು ಅವಬಿತವಾಗಿದ್ದು,ಗಣೇಶ ಉತ್ಸವದಲ್ಲಿ ನಮಗೂ ಅನುಮತಿ ಕೊಟ್ಟು ಬದುಕಲು ಅವಕಾಶ ಕೊಡಿ ಎಂದು ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್ ಮಾಲೀಕರು ಮನವಿ ಮಾಡಿಕಡಿದ್ದಾರೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *