ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ ಬೆಳೆ ಹಾನಿ ಸೇರಿದಂತೆ ಇತರ ಹಾನಿಯನ್ನು ಅದ್ಯಯನ ಮಾಡಲು ಕೇಂದ್ರದ ಅದ್ಯಯನ ತಂಡ ಬೆಳಗಾವಿಗೆ ಆಗಮಿಸಿದೆ
ಇಂದು ಬೆಳಿಗ್ಗೆ ಬೆಳಗಾವಿಗೆ ಬಂದಿರುವ ಕೇಂದ್ರದ ತಂಡ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಇತರ ಅಧಿಕಾರಿಗಳ ಜೊತೆ,ಸಭೆ ನಡೆಸಿದೆ
ಸಭೆಯಲ್ಲಿ ಜಿಲ್ಲಾಧಿಕಾರಿಗಳು ವಿಪರೀತ ಮಳೆಯಿಂದ ಎಷ್ಟು ನಷ್ಟ ವಾಗಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿದ್ದಾರೆ,ಬೆಳೆಹಾನಿ,ಸಾರ್ವಜನಿಕ ಆಸ್ತಿ,ಮನೆಗಳ ಹಾನಿ ಸೇರಿದಂತೆ ಜಿಲ್ಲೆಯಲ್ಲಿ ಸಂಭವಿಸಿದ ಎಲ್ಲ ಘಟನಾವಳಿಗಳ ಸಮಗ್ರ ಚಿತ್ರಣವನ್ನು ಬೆಳಗಾವಿಯ ಅಧಿಕಾರಿಗಳು ಕೇಂದ್ರದ ತಂಡದ ಎದುರು ಮಂಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ,ಕೇಂದ್ರದ ತಂಡ,ಗೋಕಾಕ್ ಹುಕ್ಕೇರಿ,ಸೇರಿದಂತೆ ಜಿಲ್ಲೆಯ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಶೀಲನೆ ಮಾಡಲಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ