ಬೆಳಗಾವಿ- ಎಂಇಎಸ್ ನಾಯಕರು ನಮ್ಮ ಸೋದರರಿದ್ದಂತೆ ಎಂದು, ನಾಡದ್ರೋಹಿ ಎಂಇಎಸ್ ಪರ ಸಂಸದ ಅನಂತಕುಮಾರ್ ಹೆಗಡೆ ಬ್ಯಾಟಿಂಗ್ ಮಾಡಿ ಸಮಸ್ತ ಕನ್ನಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿನ್ನೆ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಅನಂತಕುಮಾರ್ ಹೆಗಡೆ ಎಂ.ಈ.ಎಸ್ ನಾಯಕರು ನಮ್ಮ ಸಹೋದರರು,ಎಂದಿದ್ದಾರೆ. ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಅನಂತಕುಮಾರ್ ಹೆಗಡೆ,ಈ ವೇಳೆ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅನಂತಕುಮಾರ್ ಹೆಗಡೆ ಭಾಷಣ ಮಾಡಿದ್ದಾರೆ.
ಖಾನಾಪುರ ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಶಾಸಕ ಆಯ್ಕೆಯಾಗಿದ್ದರು’,ಅದಕ್ಕೂ ಮುನ್ನ ಖಾನಾಪುರದಲ್ಲಿ ಎಂಇಎಸ್ ಆಯ್ಕೆಯಾಗುತ್ತಾ ಬಂದಿತ್ತು,ಇದೇನೂ ಫರಕ್ ಬೀಳಲ್ಲ,ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಬಾರದಿತ್ತು, ಕಳೆದ ಹದಿನೈದು ವರ್ಷಗಳಲ್ಲಿ ಖಾನಾಪುರಕ್ಕೆ ಭೂಮಿಪೂಜೆಗೆ ಅತ್ಯಂತ ಕಡಿಮೆ ಬಾರಿ ಬಂದಿದ್ದೇನೆ, ಏಕೆಂದರೆ ನಮ್ಮ ಸಹೋದರರಂತಿದ್ದ ಎಂಇಎಸ್‌ನವರು ಭೂಮಿಪೂಜೆ ಮಾಡ್ತಿದ್ರು,
ಅವರು ಭೂಮಿಪೂಜೆ ಮಾಡಿದರೇನೂ ನಾನು ಮಾಡಿದರೇನೂ ವ್ಯತ್ಯಾಸ ಇರ್ತಿರಲಿಲ್ಲ’
ಆದರೆ ಈಗ ಅನಿವಾರ್ಯ ಇದೆ, ನಾವೇ ಭೂಮಿಪೂಜೆ ಮಾಡಬೇಕಾಗಿದೆ’ ಎಂದು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿ,ಎಂ,ಈ ಎಸ್ ಅಪ್ಪಿಕೊಂಡಿದ್ದಾರೆ.
ಸೋದರತ್ವ ಸಂಬಂಧ ತಿಳಿಯುವ ಪರಿಸ್ಥಿತಿಯಲ್ಲಿ ಅವರು(ಕಾಂಗ್ರೆಸ್) ಇಲ್ಲ’ಸೋದರತ್ವದ ಸಂಬಂಧ ಸೋದರರ ಜೊತೆ ಇರುತ್ತೆ’
ಪರೋಕ್ಷವಾಗಿ ಎಂಇಎಸ್ ಪರ ಸಂಸದ ಅನಂತಕುಮಾರ್ ಹೆಗಡೆ ಬ್ಯಾಟಿಂಗ್ ಮಾಡಿದ್ದು,ಮುಂಬರುವ ದಿನಗಳಲ್ಲಿ ಬಿಜೆಪಿಯವರೇ ಖಾನಾಪುರ ಶಾಸಕರಾಗಬೇಕು, ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಭೂಮಿಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ‘ಕೈ’ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಆಹ್ವಾನಿಸದ ಆರೋಪಿಸಿ, ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು
*ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಎಂಇಎಸ್ ನಮ್ಮ ಸೋದರ ಎಂದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.