ಬೆಳಗಾವಿ
ಬೆಳಗಾವಿಯಲ್ಲಿ ಕಾಮುಕನೊಬ್ಬ ತನ್ನ ಅಟ್ಟಹಾಸ ಮೆರೆದಿದ್ದಾನೆ. ಎರಡು ವರ್ಷದ ಕಂದಮ್ಮನನ್ನ ಅತ್ಯಾಚಾರ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಬಾಲಕಿ ತ್ರೀವ್ರ ರಕ್ತಸ್ರಾವದಿಂದ ನರಳಿದ್ರು ಕರುಣೆ ತೋರದ ಪಾಪಿ, ಕುಡಿದ ಮತ್ತಿನಲ್ಲಿ ಬಾಲಕಿಗೆ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದ್ದಾನೆ. ಸದ್ಯ ಅಸ್ವಸ್ಥ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಇಂಥದೊಂದು ಅಮಾನವಿಯ ಘಟನೆ ನಡೆದಿದ್ದು,ಕಾಮುಕನೊಬ್ಬ ತನ್ನ ಕಾಮವಾಂಚೆಗೆ ಮುಗ್ದ ಕಂದಮ್ಮನನ್ನ ಬಳಸಿಕೊಂಡಿದ್ದಾನೆ. ಪ್ರಪಂಚದ ಅರಿವೇ ಇಲ್ಲದ ಎರಡುವರೆ ವರುಷದ ಹಸುಳೆಯನ್ನ ಈ ದುರುಳ ರೇಪ್ ಮಾಡಿ ಕೊಲೆಗೆಯತ್ನಿಸಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲತಾಲೂಕಿನ ವಣ್ಣೂರ ಗ್ರಾಮದ ಸುಭಾಸ್ ನಾಯ್ಕ ಎಂಬ 21 ವರುಷದ ಕೀರಾತಕ ಶಾಲಾ ಆವರಣದಲ್ಲಿ ಆಡಲು ಬಂದ ಬಾಲಕಿಯ ಮೇಲೆ ರಾಕ್ಷಸನಂತೆ ಎರಗಿ ಅತ್ಯಾಚಾರ ಮಾಡಿದ್ದಾನೆ. ಇತ್ತ ಕತ್ತಲಾಗುತ್ತ ಬಂದ್ರು ಮನೆಗೆ ಬಾರದ ಕಂದಮ್ಮನನ್ನ ಹುಡುಕುತ್ತಿದ್ದ ಮನೆಯವ್ರು ಊರಿನ ಶಾಲಾ ಆವರಣಕ್ಕೆ ಹೋಗಿ ನೋಡುವಷ್ಟರಲ್ಲಿ ಕಾಮುಕ ಪುಟ್ಟ ಮಗುವಿನ ಮೇಲೆ ರಾಕ್ಷಸನಂತೆ ಎರಗಿ ಮಗುವನ್ನು ಜೀವಂತವಾಗಿ ಗುಡಿ ತೊಡಿ ಮುಚ್ಚುತ್ತಿದ್ದ.
ಇನ್ನು ಹತ್ತಿರ ಹೋಗುವಷ್ಟರಲ್ಲಿ ಬಾಲಕಿಯನ್ನ ಬಿಟ್ಟು ಪರಾರಿಯಾಗ್ತಿದ್ದ ಕಾಮುಕನನ್ನ ಹಿಡಿದ ಸ್ಥಳಿಯರು ಹಿಗ್ಗಾ-ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತ ರಕ್ತ-ಸಿಕ್ತ ಸ್ಥಿತಿಯಲ್ಲಿ ಅಸ್ವಸ್ಥಳಾಗಿದ್ದ ಕಂದಮ್ಮನನ್ನ ಮನೆಯವ್ರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇಂಥ ಹೇಯ ಕೃತ್ಯವೆಸಗಿದ ನಂತರ ಆರೋಪಿ ಬಾಲಕಿಯನ್ನ ಅದೇ ಶಾಲಾ ಆವರಣದಲ್ಲಿ ಜೀವಂತ ಹೂಳಲು ಗುಂಡಿ ತೋಡಿದ್ದ ಎಂಬುದು ನಾಗರಕ ಸಮಾಜ ತೆಲೆತಗ್ಗಿಸುವ ಸಂಗತಿಯೇ ಸರಿ. ಇಂತಹ ರಾಕ್ಷಸ ಕೃತ್ಯವೆಸಗಿದ ಇತನ್ನು ಯಾವುದೇ ಕಾರಣಕ್ಕೂ ಕಾಮುಕನನ್ನ ಹಾಗೆ ಬೀಡಬೇಡಿ ಆತನಿಗೆ ಗಲ್ಲು ಶಿಕ್ಷೆಯಾಗಲಿ ಅಂತ ಮಗುವಿನ ಸಂಬಂಧಿಕರು ಮಾದ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಒಟ್ನಲ್ಲಿ ಆರೋಪಿ ಸುಭಾಸ್ ನಾಯ್ಕ ವಿರುದ್ದ ನೇಸರಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು,ಆರೋಪಿಯನ್ನ ಬಂಧಿಸಿದ ಪೊಲೀಸರು ಹಿಂಡಲಗಾ ಜೈಲಿಗಟ್ಟಿದ್ರೆ.. ಅತ್ತ ಮಗುವಿನ ಸ್ಥಿತಿ ಕಂಡು ಚಿಕಿತ್ಸೆ ನೀಡುತ್ತಿರೋ ವೈದ್ಯರು ಮಮ್ಮಲ ಮರಗುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ