ಬೆಳಗಾವಿ- ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳಿಗೆಮರಡಲ್ ಕೊಡುವ ಬದಲು ಸಾವಿರ ರೂ ನಿಡಿರುವ ವಿಷಯ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ವಿಷಯದ ಕುರಿತು ರ್ಯಾಂಕ್ ಪಡೆದ ವಿದ್ಯಾರ್ಥಿ ಗಳ ಪೋಷಕರು ರಾಜ್ಯಪಾಲರು ಮತ್ತು ಪ್ರಧಾನಿಗೆ ದೂರು ನೀಡಿದ್ದಾರೆ.
ರಾಣಿಚನ್ನಮ್ಮ ವಿಶ್ವ ವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಸಾಧನೆಗೈದ ಸೃಷ್ಟಿ ಅಮರೇಂದ್ರ ಜ್ಞಾನಿಗೆ ಚಿನ್ನದ ಪದಕ ನೀಡಿ ಗೌರವಿಸದೇ ವಿವಿ ವಂಚನೆ ಮಾಡಿದ್ದಾರೆ ಎಂದು ಗುರು ಅಮರೇಂದ್ರ ಜ್ಞಾನಿ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ವಿವಿಯ ಬಿ.ಎ.ಅಪರಾಧಶಾಸ್ತ್ರ ಮತ್ತು ಅಪರಾಧ ನ್ಯಾಯಿಕ ವಿಷಯದಲ್ಲಿ ವಿಶ್ವವಿದ್ಯಾಲಯದ ಪ್ರಥಮ ರ್ಯಾಂಕ್ ಪಡೆದಿರುತ್ತಾಳೆ.ಅತ್ಯುತ್ತಮ ಸಾಧನೆ ಮಾಡಿದ ನನ್ನ ಮಗಳಿಗೆ ಚಿನ್ನದ ಪದಕ ನೀಡದೆ ಅನುಚಿತವಾಗಿ ನಡೆದುಕೊಂಡಿದ್ದಾರೆ ವಿವಿಯ ವಿಸಿ ರಾಮಚಂದ್ರೇಗೌಡ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ರಾಣಿಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಲಾಗುವುದು ಎಂದು ಈ ಮೊದಲೇ ಪತ್ರ ಬರೆದಿದ್ದರು. ನ್ಯಾಯ ಸಮ್ಮತವಾಗಿ ಚಿನ್ನದ ಪದಕ ನೀಡುವ ಬದಲು ಘಟಿಕೋತ್ಸವ ಮುಗಿದ ಬಳಿಕ ಚಿನ್ನದ ಪದಕ ನೀಡಿದರೆ ಕರೋನಾ ಬರುತ್ತದೆ ಆದ್ದರಿಂದ ಸಾವಿರ ರು. ಮೊತ್ತದ ಡಿಡಿ ನೀಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ. ಆರ್ ಸಿಯು ವಿಸಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ಸೃಷ್ಟಿ ಜ್ಞಾನಿ ಮಾತನಾಡಿ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಯಾವ ವಿದ್ಯಾರ್ಥಿಗಳಿಗೂ ಪದಕ ವಿತರಣೆ ಮಾಡಿಲ್ಲ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಮಾನ ಮಾಡಲಾಗಿದೆ. ರಾಣಿ ಚನ್ನಮ್ಮ ವಿಸಿಗೆ ಕೇಳಿದರೆ ಡಿಡಿ ತೆಗದುಕೊಳ್ಳಿ ಇಲ್ಲ ಕಾನೂನು ಹೋರಾಟ ಮಾಡುವುದಾದರೆ ಮಾಡಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಾವು ಈಗ ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.