ಬೆಳಗಾವಿ- ರಾಮದುರ್ಗ ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರಕರಣ ಹೊಸ ಟ್ವೀಸ್ಟ ಪಡೆದುಕೊಂಡಿದ್ದು ಸತ್ಯಾಂಶ ಬಯಲಾಗಿದೆ.
ದುಷ್ಕರ್ಮಿಗಳು ಮೂರ್ತಿ ಭಗ್ನಮಾಡಿದ್ದಾರೆ ಎಂದು ಕಟಕೋಳ ಠಾಣೆಯಲ್ಲಿ ದೂರು ನೀಡಿದ್ದ ಗ್ರಾಮದ ಹಿರಿಯರು ದೂರನ್ನು ವಾಪಸ್ ಪಡೆದುಕೊಂಡು ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.
ಯಾಕಂದ್ರೆ ಈ ಮೂರ್ತಿಯನ್ನು ಯಾರೋ ದುಷ್ಕರ್ಮಿಗಳು ಭಗ್ನಗೊಳಿಸಿರಲಿಲ್ಲ.ಗ್ರಾಮದ ಕೆಲವು ರೈತರು ಮದ್ಯರಾತ್ರಿ ಹೊಲಕ್ಕೆ ನೀರು ಹಾಯಿಸಲು ಹೋಗುತ್ತಿರುವಾಗ,ಜಗಜ್ಯೋತಿ ಬಸವೇಶ್ವರ ಮೂರ್ತಿಯ ಮೇಲಿದ್ದ ಶಾಲು ಕೆಳಗೆ ಬಿದ್ದಿದ್ದನ್ನು ಗಮನಿಸಿದ್ದಾರೆ,ಮೂರ್ತಿಯ ಮೇಲೆ ಹತ್ತಿ ಶಾಲು ಸರಿಪಡಿಸುವಾಗ,ಆಕಸ್ಮಿಕವಾಗಿ ಮೂರ್ತಿಯ ಕೈ ಮುರಿದು ಕೆಳಗೆ ಬಿದ್ದಿದೆ,ಶಾಲು ಸರಿಪಡಿಸುತ್ತಿದ್ದ ಬಸವ ಭಕ್ತರು ಹೆದರಿ ಈ ವಿಷಯವನ್ನು ಇಲ್ಲಿಯವರೆಗೆ ಮುಚ್ಚಿಟ್ಟಿದ್ದರು
ಆದ್ರೆ ಈ ಪಕ್ರರಣ ವಿಕೋಪಕ್ಕೆ ಹೋಗುತ್ತಿರುವದನ್ನು ಗಮನಿಸಿದ ಅವರು ಗ್ರಾಮದ ಹಿರಿಯರ ಮುಂದೆ ಸತ್ಯಾಂಶ ಹೇಳಿದ್ದರಿಂದ ಗ್ರಾಮದ ಹಿರಿಯರು ದೂರನ್ನು ವಾಪಸ್ ಪಡೆದಿದ್ದಾರೆ.ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.