ಬೆಳಗಾವಿ-ಬೆಳಗಾವಿ ಜಿಲ್ಲೆಗೆ ನಾಲ್ಕು ಮಂತ್ರಿ ಸ್ಥಾನ ,ಜೊತೆಗೆ ಜಿಲ್ಲೆಗೆ ಉಪಮುಖ್ಯಮಂತ್ರಿಯ ಸ್ಥಾನಮಾನ,ಅಗಣಿತ ನಿಗಮ ಮಂಡಳಿಗಳ ಅದ್ಯಕ್ಷ ಸ್ಥಾನ,ಈ ಎಲ್ಲ ಸ್ಥಾನ ಮಾನಗಳನ್ನು ನೋಡಿ,ಎಲ್ಲರೂ ಹಾಪ್ ಗವರ್ನಮೆಂಟ್ ಈಗ ಬೆಳಗಾವಿಯಲ್ಲೇ ಇದೆ.ಎಂದು ಹೇಳಲು ಶುರು ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ನವರ ಬೆಳಗಾವಿ ಜಿಲ್ಲೆಯ ಮೇಲಿನ ಪ್ರೀತಿಯೋ,ಅಥವಾ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಅದೃಷ್ಠವೋ ಗೊತ್ತಿಲ್ಲ ಆದ್ರೆ,ಈ ಬಾರಿ ಬೆಳಗಾವಿ ಜಿಲ್ಲೆಗೆ ಭರಪೂರ್ ಪಾವರ್ ಸಿಕ್ಕಿದೆ.
ಮುಂದೆ ನಡೆಯ ಬಹುದಾದ ಸಚಿವ ಸಂಪುಟದ ವಿಸ್ತರಣೆಯಲ್ಲಿ,ಅಥವಾ ಪುನಾರಚನೆಯಲ್ಲಿ ಬೆಳಗಾವಿ ಜಿಲ್ಲೆ ಮತ್ತೆ ಭಂಪರ್ ಲಾಟರಿ ಹೊಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಇಷ್ಟೆಲ್ಲಾ ಮಂತ್ರಿ ಸ್ಥಾನ,ನಿಗಮ ಮಂಡಳಿ ಸ್ಥಾನ ಸಿಕ್ಕಿದ ಮೇಲೆ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಬರದಸ್ತ್ ಅಭಿವೃದ್ಧಿ ಆಗಿರಬಹುದು ಎಂದು ಯಾರಾದ್ರು ಅಂದುಕೊಂಡರೆ ಅದು ಕೇವಲ ಭ್ರಮೆ ಅನ್ನೋದು ಸತ್ಯ
ಕರ್ನಾಟಕ ಸರ್ಕಾರದ ದೆಹಲಿಯ ಪ್ರತಿನಿಧಿಯೂ ಬೆಳಗಾವಿಯ ಶಂಕರಗೌಡ ಪಾಟೀಲ ಎನ್ನುವದು ವಿಶೇಷ ,ಇಷ್ಟೆಲ್ಲಾ ಸ್ಥಾನ ಮಾನಗಳು ಸಿಕ್ಕರೂ ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯ.
ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ಥರು ನಮಗೊಂದು ಸೂರು ಕೊಡಿ ಎಂದು ಪ್ರತಿನಿತ್ಯ ಬೆಳಗಾವಿಯ ಡಿಸಿ ಕಚೇರಿಗೆ ಬರುವದನ್ನು ಯಾರೊಬ್ಬರೂ ನಿಲ್ಲಿಸಲಿಲ್ಲ. ಮಸ್ಕೀ ಬಸವಕಲ್ಯಾಣಕ ಕ್ಷೇತ್ರಗಳಿಗೆ 7500 ಮನೆಗಳು ಮಂಜೂರು ಆದರೂ ಬೆಳಗಾವಿ ಜಿಲ್ಲೆಯ ನೆರೆಯ ಸಂತ್ರಸ್ಥರು ಮನೆಗಳು ಇಲ್ಲದೆ ಗುಡಿ ಗುಂಡಾರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಬಹಳಷ್ಟು ಜನ ಸಂತ್ರಸ್ಥರು ಇನ್ನೂ ತಗಡಿನ ಶೆಡ್ ನಲ್ಲೇ ವಾಸವಾಗಿದ್ದು,ಬೆಳಗಾವಿ ಜಿಲ್ಲೆಯ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಬಿನ್ ಪಗಾರ್ ಫುಲ್ ಅಧಿಕಾರ್ ಎನ್ನುವಂತಾಗಿದೆ.