Breaking News

ಶಾಲಾ ಕಾಲೇಜುಗಳ ಸುತ್ತ ಮುತ್ತ ತಂಬಾಕು ಪ್ರೋಡಕ್ಟ್ ಮಾರುವದು ಶಿಕ್ಷಾರ್ಹ ಅಪರಾಧ..

ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಂಬಾಕು
ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ತರಬೇತಿ ಕಾರ್ಯಾಗಾರ

ಬೆಳಗಾವಿ, ಡಿ.5(ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಇವರ ಸಹಯೋಗದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ”ವನ್ನು ಜಿಲ್ಲಾ ತರಬೇತಿ ಕೇಂದ್ರ ಬೆಳಗಾವಿ ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ ಮತ್ತು ವಿಭಾಗಿ ಸಹ ನಿದೇಶಕರು ಬೆಳಗಾವಿ ವಿಭಾಗ, ಬೆಳಗಾವಿ ಡಾ. ಎಸ್.ವಿ ಮುನ್ಯಾಳ ಇವರು ಕಾರ್ಯಾಗಾರ ಉದ್ಘಾಟಿಸಿ ಸಿಗರೇಟ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಇನ್ನೊಬ್ಬರ ಆರೋಗ್ಯವು ಕೂಡಾ ಹಾಳಾಗುತ್ತದೆ ನಾವೆಲ್ಲರೊ ಕೊಡಾ ಪರೋಕ್ಷವಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದೆವೆಂದು ತಿಳಿಸಿದರು.

ಪ್ರಾಂಶುಪಾಲರು ಜಿಲ್ಲಾ ತರಬೇತಿ ಕೆಂದ್ರ ಬೆಳಗಾವಿ ಡಾ. ಸರೋಜ ತಿಗಡಿ ಬಾಯಿ ಕ್ಯಾನ್ಸರ ಕುರಿತು ಪಿಪಿಟಿ ಮೂಲಕ ಉಪನ್ಯಾಸ ನೀಡಿದರು. ಯುವ ಜನಾಂಗದವರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಯುವ ಜನಾಂಗ ಈ ದುಷ್ಟಟಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದರು. ಇವರು ಮಾತನಾಡುತ್ತಾಗರ್ಭಿಣಿ ಮಹಿಳೆಯರು ತಂಬಾಕು ಸೇವನೆ ಮಾಡುವುದರಿಂದ ಮಹಿಳೆಯರಲ್ಲಿ ನೀರ್ಜಿವ ಜನನ, ಆವಧಿ ಪೂರ್ಣ ಜನನ ಹಾಗೂ ಕಡಿಮೆ ತೂಕ ಇರುವ ಮಕ್ಕಳು ಮತ್ತು ಜನನವಾದರು ಅಂಗವಿಕಲತೆಯಾಗಿ ಹುಟ್ಟುವ ಮಕ್ಕಳ ಪ್ರಮಾಣ ಜಾಸ್ತಿಯಾಗಿರುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಭಾಗೀಯ ಸಂಯೋಜಕರು ರಾಜ್ಯ ತಂಬಾಕು ನಿಯಂತ್ರಣ ಶ್ರೀಯುತ ಮಹಾಂತೇಶ ಉಳ್ಳಾಗಡ್ಡಿ ಇವರು ತಂಬಾಕಿನ ಕಾನೂನು ಅರಿವು ಕೋಟ್ಪಾ-2003 ರ ಬಗ್ಗೆ ಸೆಕ್ಷನ್-4 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಲಾಗಿದೆ. ಈ ಕಾನೂನು ಉಲ್ಲಂಘಿಸಿದ ವ್ಯಕ್ಕಿಗೆ 200/-ದಂಡ ವಿಧಿಸಲಾಗುವುದು. ಸೆಕ್ಷನ್-5 ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇದ. ಸೆಕ್ಷನ್-6ರ ಪ್ರಕಾರ ತಂಬಾಕು ಉತ್ಪನ್ನಗಳ ಅಪ್ರಾಪ್ತ ವಯಸ್ಕರಿಗೆ ನಿಯಂತ್ರಣ ಮಾಡುವುದು ಹಾಗೂ ಸೆಕ್ಷನ್-6(ಬಿ) ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಮೀಟರ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್-7 ಪ್ರಕಾರ ಸಿಗರೇಟ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ಧಿಷ್ಡ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿ ಕೋಟ್ಪಾ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಡಾ: ಬಿ. ಎನ್ ತುಕ್ಕಾರ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ತಂಬಾಕು ನಿಯಂತ್ರಣಾಧಿಕಾರಿಗಳು ಬೆಳಗಾವಿ ಇವರು ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಹಲುವಾರು ರೀತಿಯ ದುಷ್ಪರಿಣಾಮ ಬಿರುತ್ತವೆ ಹಾಗೂ ತಂಬಾಕಿನಲ್ಲಿ ವಿವಿಧ ರೀತಿಯ ರಾಸಾಯನಿಕ ಆಂಶಗಳಿರುತ್ತವೆ ಹೀಗಾಗಿ ಸಾರ್ವನಿಕರು ತಂಬಾಕು ಸೇವನೆ ತ್ಯೆಜಿಸ ಬೇಕು ಎಂದು ಕರೆ ನೀಡಿದರು. ತಂಬಾಕು ಸೇವನೆಯಿಂದ ದೈಹೀಕವಾಗಿ ಮತ್ತು ಮಾನಸಿಕವಾಗಿ ದುಷ್ಟಟಕ್ಕೆ ಒಳಗಾಗಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೆವೆ ಎಂದು ಮಾತನಾಡಿದರು.

ಈ ತರಬೇತಿ ಕಾರ್ಯಾಗಾರದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಹಾಜರಿದ್ದರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಮಾಜ ಕಾರ್ಯಕರ್ತೆಯಾದ ಕುಮಾರಿ ಕವಿತಾ ರಾಜನ್ನವರ ನಿರೂಪಿಸಿದರು. ಹಾಗೂ ಜಿಲ್ಲಾ ಸಲಹೆಗಾರರು ಶ್ವೇತಾ ಪಾಟೀಲ ವಂದಿಸಿದರು.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *