Breaking News

ರೋಷನ್ ಬೇಗ್ ಎದೆಯ ಮೇಲೆ ಕುಳಿತು ಜೈ ಮಹಾರಾಷ್ಟ್ರ ಎಂದು ಕೂಗ್ತಾರಂತೆ..!

ಬೆಳಗಾವಿ: ಕರ್ನಾಟಕದ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಅವರಂತಹ ಶಕುನಿಗಳಿಗೆ ಜೈ ಮಹಾರಾಷ್ಟ್ರ ಘೋಷಣೆ ಸಹಿಸಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಅವರು ಪ್ರೋತ್ಸಾಹಿಸುವುದಿಲ್ಲ. ಜೈ ಮಹಾರಾಷ್ಟ್ರ ಘೋಷಣೆಗೆ ನಿರ್ಬಂಧಕ್ಕೆ ಮುಂದಾಗಿರುವ ರೋಷನ್ ಬೇಗ್ ಅವರನ್ನು ಎನ್‌ಡಿಎ ಪರೀಕ್ಷೆಗೊಳಪಡಿಸಬೇಕಿದೆ. ಅವರ ಮೈಯಲ್ಲಿ ದೇಶಿಯ ರಕ್ತ ಹರಿಯುತ್ತಿಲ್ಲ. ಇದು ದೇಶಕ್ಕೆ ತುಂಬಾ ಅಪಾಯಕಾರಿ. ಆದರೆ, ಮಹಾರಾಷ್ಟ್ರ ಬೇಗ್ ಅವರ ಎದೆಮೇಲೆ ಕುಳಿತು ಜೈ ಮಹಾರಾಷ್ಟ್ರ ಘೋಷಣೆ ಅಗತ್ಯತೆಯನ್ನು ಹೇಳುವತನದ ಸುಮ್ಮನೇ ಇರುವುದಿಲ್ಲ ಎಂದು ಶಿವಸೇನೆ ಮುಖವಾಣಿ ಸಾಮನಾ ತನ್ನ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದೆ.

ಪ್ರಸ್ತುತ ಮಹಾರಾಷ್ಟ್ರ ರಾಜಕಾರಣಿಗಳನ್ನು ಬಾಹುಬಲಿ ಮತ್ತು ಕಟ್ಟಪ್ಪಗೆ ಹೋಲಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೂಡ ಬಾಹುಬಲಿ ಪಾರ್ಟ-೨ ತೋರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನು ನಿಮಗೆ ತೋರಿಸಲಿದ್ದಾರೆ. ಆದರೆ, ಮರಾಠಿಗರ ಸ್ವಾಭಿಮಾನ ಕೆಣಕುವ ಕರ್ನಾಟಕ ಸರ್ಕಾರಕ್ಕೆ ಬಾಹುಬಲಿ ಟ್ರೇಲ್ಲರ್‌ನ್ನಾದರೂ ತೋರಿಸಬೇಕು ಎಂಬ ಬೇಡಿಕೆ ಮುಖ್ಯಮಂತ್ರಿಯಲ್ಲಿ ನಮ್ಮ ಮನವಿ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ ಸ್ವತಃ ಮರಾಠಿ ಭಾಷಿಯ ಬಗ್ಗೆ ಅಭಿಮಾನ ಇದ್ದರೆ ಕೂಡಲೇ ಅವರು ಬೆಳಗಾವಿಗೆ ಹೋಗಿ ಮರಾಠಿಗರ ಸಮಸ್ಯೆ ಆಲಿಸಬೇಕು. ಗಡಿಭಾಗದಲ್ಲಿ ಮರಾಠಿಗರ ಮೇಲೆ ಅನ್ಯಾಯ, ದಬ್ಬಾಳಿಕೆ ನಿತ್ಯ ನಿರಂತರವಾಗಿದೆ. ಆದರೆ, ಮಹಾರಾಷ್ಟ್ರದ ರಾಜಕೀಯ ಮುಖಂಡರು ಕನ್ನಡಿಗರ ಧಮನಕಾರಿ ಕ್ರಮದ ಬಗ್ಗೆ ದನಿ ಎತ್ತದೇ ಮೌನಕ್ಕೆ ಶರಣಾಗಿದ್ದಾರೆ. ಕರ್ನಾಟಕದ ಒಬ್ಬ ಭ್ರಷ್ಟ ಮಂತ್ರಿ ರೋಷನ್ ಬೇಗ್ ಅವರು ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ಜೈ ಮಹಾರಾಷ್ಟ್ರ್ ಘೋಷಣೆ ಹಾಕಿದರೆ ಅವರ ಸದಸ್ಯತ್ವ ರದ್ದುಗೊಳಿಸಲು ಹೊಸ ಕಾನೂನು ಜಾರಿಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಎಂಇಎಸ್ ಶಾಸಕರಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮರಾಠಿಗರ ಹಿಡಿತದಲ್ಲಿವೆ. ಜೈ ಮಹಾರಾಷ್ಟ್ರ ಘೋಷಣೆಗೆ ನಿರ್ಬಂಧ ಹೇರುವ ಮೂಲಕ ಬೇಗ್ ಅವರು ದೇಶದ ನಾಗರಿಕರ ಸ್ವಾತಂತ್ರ್ಯ ಹರಣಕ್ಕೆ ಮುಂದಾಗಿದ್ದಾರೆ. ೬೦-೬೫ ವರ್ಷಗಳಿಂದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವಿದೆ. ಈ ಗಡಿ ವಿವಾದ ಸುಪ್ರೀಂಕೋರ್ಟನಲ್ಲಿ ಬಾಕಿ ಇದೆ. ಈ ನಡುವೆ ರೋಷನ್ ಬೇಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಜೈ ಮಹಾರಾಷ್ಟ್ರ ಘೋಷಣೆಗೆ ನಿರ್ಬಂಧ ಹೇರುವ ಮೂಲಕ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿದಂತಾಗಿದೆ. ಕರ್ನಾಟಕದ ವಿವಿಧೆಡೆ ಪಾಕಿಸ್ತಾನ ಧ್ವಜಗಳು ಹಾರಾಜಿಸುತ್ತಿವೆ. ಪಾಕ್ ವಿರುದ್ಧ ಧ್ವನಿ ಎತ್ತಲು ಬೇಗ್ ಅವರಿಗೆ ಧೈರ್ಯ ಎಲ್ಲಿದೆ? ದೇಶದಲ್ಲಿ ಭಯೋತ್ಪಾದಕರು ನುಸುಳಿದ್ದಾರೆ. ಕರ್ನಾಟಕದಲ್ಲಿಯೂ ಭಯೋತ್ಪಾದಕರು ಇದ್ದಾರೆ. ಅಂತಹವರ ಬಗ್ಗೆ ಮಾತನಾಡದ ಬೇಗ್ ಜೈ ಮಹಾರಾಷ್ಟ್ರ ಘೋಷಣೆಗೆ ನಿರ್ಬಂಧ ಏಕೆ ಹಾಕುತ್ತಾರೆ. ಮರಾಠಿ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಣೆಗಾಗಿ ಹೋರಾಟ ಮಾಡುವುದು ಅಪರಾಧವಲ್ಲ.ಗಡಿಭಾಗದ ಮರಾಠಿಗರ ಸಮಸ್ಯೆ ಆಲಿಸಿ, ಪರಿಹರಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರ ಚಂದ್ರಕಾಂತ ಪಾಟೀಲ ಅವರಿಗೆ ಗಡಿ ಉಸ್ತುವಾರಿ ಸಚಿವರ ಹೊಣೆ ನೀಡಿದೆ. ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಹೋಗಿ ಜೈ ಮಹಾರಾಷ್ಟ್ರ ಘೋಷಣೆ ಮೊಳಗಿಸಿದರೆ ಅವರ ಸದಸ್ಯತ್ವವೇನೂ ರದ್ದಾಗುವುದಿಲ್ಲ. ಇದರಿಂದ ಇಡೀ ಮಹಾರಾಷ್ಟ್ರವೇ ಹೆಮ್ಮೆ ಪಡುತ್ತದೆ. ಬೆಳಗಾವಿ ಗಡಿ ಬಾಗದ ಮರಾಠಿಗರ ಮೇಲೆ ಆಗುತ್ತಿರುವ ದೌರ್ಜನ್ಯ, ಅನ್ಯಾಯದ ಬಗ್ಗೆ ರಾಷ್ಟ್ರೀಯ ಪಕ್ಷಗಳು ದನಿ ಎತ್ತಿ ಪ್ರಶ್ನೆ ಮಾಡುತ್ತಿಲ್ಲ.

ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯಾದ್ಯಂತ ಕನ್ನಡಿಗರು ವಾಸವಾಗಿದ್ದಾರೆ. ಕನ್ನಡ ಸಂಘ-ಸಂಸ್ಥೆಗಳಿವೆ. ಕನ್ನಡಿಗರಿಗೆ ಯಾವತ್ತೂ ನಾವು ಅಡೆತಡೆ ಮಾಡಿಲ್ಲ. ನಾವು ಅನ್ಯ ಭಾಷಿಕರನ್ನು ದ್ವೇಷಿಸಿಲ್ಲ. ರೋಷನ್ ಬೇಗ್ ಅಂತಹವರಿಗೆ ಪಾಕ್ ಪರ ಘೋಷಣೆ ನಡೆಯುತ್ತದೆ ಹೊರತು ಅವರಿಗೆ ಜೈ ಮಹಾರಾಷ್ಟ್ರ ಘೋಷಣೆ  ಬೇಡವಾಗಿದೆ. ಬೇಗ್ ಅವರ ಗಂಡಸತ್ವದ ಕುರಿತು ಎನ್‌ಡಿಎ ಪರೀಕ್ಷೆ ಮಾಡಬೇಕು. ಅವರ ಮೈಯಲ್ಲಿರುವ ರಕ್ತ ದೇಶೀಯವಾಗಿಲ್ಲ. ಇದು ದೇಶಕ್ಕೆ ಬಲು ಮಾರಕವಾಗುತ್ತದೆ. ಆದರೆ, ಮಹಾರಾಷ್ಟ್ರ ಬೇಗ್ ಅವರ ಎದೆಮೇಲೆ ಕುಳಿತು ಜೈ ಮಹಾರಾಷ್ಟ್ರದ ಘೋಷಣೆಯ ಅಗತ್ಯವನ್ನು ಹೇಳುವತನದ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *