Breaking News

ಬೆಳಗಾವಿ ಜಿಲ್ಲೆಯ ಒಂದು ವಾರ್ಡಿನಲ್ಲಿ ಮಾತ್ರ ಮರು ಮತದಾನ..

ಬೆಳಗಾವಿ,- ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆ ಭಾನುವಾರ (ಡಿ.27) ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದ್ದು, ಎರಡನೇ ಹಂತದಲ್ಲಿ ಒಟ್ಟಾರೆ ಶೇ.‌82.70 ರಷ್ಟು ಮತದಾನ ನಡೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು.

ಒಟ್ಟಾರೆ ಶೇ.82.70 ಮತದಾನ:

ಏಳು ತಾಲ್ಲೂಕುಗಳಲ್ಲಿ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ.82.70 ರಷ್ಟು ಮತದಾನವಾಗಿರುತ್ತದೆ.

ಎರಡು ಹಂತಗಳಲ್ಲಿ ಜಿಲ್ಲೆಯ ಒಟ್ಟು ಒಟ್ಟು 477 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಏಳು ತಾಲ್ಲೂಕುಗಳ 259 ಗ್ರಾಮ ಪಂಚಾಯಿತಿಗಳ ಮತದಾನ ಡಿ.22 ರಂದು ನಡೆದಿದೆ.

ಎರಡನೇ ಹಂತದಲ್ಲಿ ಏಳು ತಾಲ್ಲೂಕುಗಳಲ್ಲಿ ನಡೆದ ಚುನಾವಣೆಗೆ ಒಟ್ಟು 1789 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ನಿಪ್ಪಾಣಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮತದಾನ:

ಎರಡನೇ ಹಂತದಲ್ಲಿ ಏಳು ತಾಲ್ಲೂಕುಗಳಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಮಾಹಿತಿಯ ಪ್ರಕಾರ ನಿಪ್ಪಾಣಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ ಶೇ.84.62 ರಷ್ಟು ಮತದಾನವಾಗಿದೆ.
ಕಾಗವಾಡ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ‌ ಅಂದರೆ ಶೇ.80.95 ರಷ್ಟು ಮತದಾನವಾಗಿದೆ.

ಏಳೂ ತಾಲ್ಲೂಕುಗಳ ಪೈಕಿ ಚಿಕ್ಕೋಡಿ(ಶೇ.84.53); ರಾಯಬಾಗ(ಶೇ.82.52); ಅಥಣಿ(ಶೇ.81.32); ಕಾಗವಾಡ (ಶೇ.80.95); ನಿಪ್ಪಾಣಿ (ಶೇ.84.62); ರಾಮದುರ್ಗ(ಶೇ.81.33) ಮತ್ತು ಸವದತ್ತಿ (ಶೇ.82.60) ಮತದಾನವಾಗಿರುತ್ತದೆ.

ಏಳು ತಾಲ್ಲೂಕುಗಳ ಒಟ್ಟು 11,59,813 ಮತದಾರರ ಪೈಕಿ‌ 9,59,193 ಜನರು ಮತ ಚಲಾಯಿಸಿದ್ದಾರೆ.

ಬೆಳಿಗ್ಗೆಯಿಂದಲೇ ಮತದಾನ ಚುರುಕಾಗಿತ್ತು. ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.8.27 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

9 ರಿಂದ 11 ಗಂಟೆಯ ಅವಧಿಯಲ್ಲಿ ಒಟ್ಟಾರೆ ಶೇ.24 ರಷ್ಟಾಗಿದ್ದ ಮತದಾನ ಪ್ರಮಾಣವು ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.45.13 ಕ್ಕೆ ಏರಿಕೆಯಾಯಿತು.

ಹೀಗೆ ಬಿರುಸಿನಿಂದ ನಡೆದ ಮತದಾನವು ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.63.93 ರಷ್ಟಾಯಿತು. ಸಂಜೆ 5 ಗಂಟೆಗೆ ಮತದಾನ ಕೊನೆಗೊಂಡಾಗ ಏಳು ತಾಲ್ಲೂಕುಗಳಲ್ಲಿ ಒಟ್ಟಾರೆ ಶೇ.82.70ರಷ್ಟು ಮತದಾನ ದಾಖಲಾಯಿತು.

ಉಳಿದ ಏಳು ತಾಲ್ಲೂಕುಗಳಲ್ಲಿ ಡಿ.22 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.81.01ರಷ್ಟು ಮತದಾನವಾಗಿತ್ತು.

ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಡಿ.30 ರಂದು ಫಲಿತಾಂಶ ಪ್ರಕಟವಾಗಲಿದೆ.
ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ.

ಮರು ಮತದಾನ…

ರಾಮದುರ್ಗ ತಾಲ್ಲೂಕಿನ ಕದಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 6 ರಲ್ಲಿ ಡಿ.29 ರಂದು ಮರು ಮತದಾನ ನಡೆಯಲಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *